ADVERTISEMENT

ಟಿ20 ಕ್ರಿಕೆಟ್ | ಹೆಚ್ಚು ಬಾರಿ 200ಕ್ಕಿಂತ ಅಧಿಕ ಮೊತ್ತ ಬೆನ್ನಟ್ಟಿ ಗೆದ್ದ ಭಾರತ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 12:34 IST
Last Updated 24 ಜನವರಿ 2020, 12:34 IST
ಕೆ.ಎಲ್‌.ರಾಹುಲ್‌
ಕೆ.ಎಲ್‌.ರಾಹುಲ್‌   

ಆಕ್ಲೆಂಡ್: ಟಿ20 ಸರಣಿಯ ಮೊದಲ ಪಂದ್ಯದಲ್ಲಿಆತಿಥೇಯ ನ್ಯೂಜಿಲೆಂಡ್ ನೀಡಿದ್ದ 204ಗುರಿಯನ್ನು ಇನ್ನೂ ಒಂದು ಓವರ್‌ ಬಾಕಿ ಇರುವಂತೆಯೇಭಾರತ ತಂಡ ತಲುಪಿತು. ಇದರೊಂದಿಗೆ ಅತಿಹೆಚ್ಚು ಬಾರಿ 200 ಮತ್ತು ಅದಕ್ಕಿಂತ ಹೆಚ್ಚು ರನ್‌ ಬೆನ್ನಟ್ಟಿ ಗೆದ್ದ ತಂಡ ಎನಿಸಿತು.

ಚುಟುಕು ಕ್ರಿಕೆಟ್‌ನಲ್ಲಿ ಇದುವರೆಗೆ 200 ಹಾಗೂ ಅದಕ್ಕಿಂತ ಹೆಚ್ಚು ಮೊತ್ತ ಬೆನ್ನಟ್ಟಿ ಗೆದ್ದ ಪಂದ್ಯಗಳ ಸಂಖ್ಯೆ ಕೇವಲ 13 ಮಾತ್ರ. ಈ ಸಾಧನೆ ಮಾಡಲು ಸಾಧ್ಯವಾಗಿರುವುದು ಕೇವಲ 8 ತಂಡಗಳಿಗೆ ಮಾತ್ರ. ಅದರಲ್ಲೂಭಾರತ ನಾಲ್ಕು ಬಾರಿ ಮತ್ತು ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ತಂಡಗಳು ತಲಾ ಎರಡೆರಡು ಸಲಈ ಸಾಧನೆ ಮಾಡಿವೆ.

ಉಳಿದಂತೆ,ನ್ಯೂಜಿಲೆಂಡ್‌, ವೆಸ್ಟ್‌ ಇಂಡೀಸ್‌, ಇಂಗ್ಲೆಂಡ್‌, ಬಾಂಗ್ಲಾದೇಶ ಮತ್ತು ಕತಾರ್‌ ತಂಡಗಳುಒಂದೊಂದು ಸಲಗುರಿ ತಲುಪಿವೆ.

ADVERTISEMENT

ಇಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್‌ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 203 ರನ್ ಗಳಿಸಿತ್ತು.ಈ ತಂಡದ ಕಾಲಿನ್‌ ಮನ್ರೋ (59), ನಾಯಕ ಕೇನ್‌ ವಿಲಿಯಮ್ಸನ್‌ (51) ಹಾಗೂ ರಾಸ್ ಟೇಲರ್‌ (54) ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 203ಕ್ಕೆ ತಂದು ನಿಲ್ಲಿಸಿದ್ದರು.

ಈ ಗುರಿಯೆದುರು ಭಾರತದ ಕೆ.ಎಲ್‌.ರಾಹುಲ್‌ (56), ನಾಯಕ ವಿರಾಟ್‌ ಕೊಹ್ಲಿ (45) ಮತ್ತು ಶ್ರೇಯಸ್‌ ಅಯ್ಯರ್‌ (ಔಟಾಗದೆ 58) ಉತ್ತಮ ಆಟವಾಡಿದರು. ಹೀಗಾಗಿ ಕೊಹ್ಲಿ ಪಡೆ 19ನೇ ಓವರ್‌ನಲ್ಲೇ 204ರನ್‌ ಗಳಿಸಿ ಗೆಲುವಿನ ನಗೆ ಬೀರಿತು. ಮಾತ್ರವಲ್ಲದೆ ಇದು ಭಾರತಕ್ಕೆ ಮೂರನೇ ಅತಿದೊಡ್ಡ ಚೇಸಿಂಗ್ ಜಯವಾಗಿದೆ. 2009ರಲ್ಲಿ ಶ್ರಿಲಂಕಾ ನೀಡಿದ್ದ 207ರನ್‌ ಎದುರು211 ರನ್‌ ಮತ್ತುಕಳೆದ ವರ್ಷ ವೆಸ್ಟ್‌ ಇಂಡೀಸ್‌ ನೀಡಿದ್ದ208 ರನ್‌ ಎದುರು 2019 ರನ್‌ಗಳಿಸಿ ಗೆದ್ದಿತ್ತು.

ಇದೇ ಮೈದಾನದಲ್ಲಿ 2008ರಲ್ಲಿ ನಡೆದಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್‌ ವಿರುದ್ಧ 244 ರನ್‌ ಗುರಿ ಬೆನ್ನಟ್ಟಿ ಗೆದ್ದಿತ್ತು. ಇದು ಚುಟುಕು ಕ್ರಿಕೆಟ್‌ನಲ್ಲಿ ಗುರಿ ಬೆನ್ನಟ್ಟಿ ಗೆದ್ದ ಅತಿದೊಡ್ಡ ಮೊತ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.