ಹ್ಯಾಮಿಲ್ಟನ್: ರೋಚಕ ಹೋರಾಟಕ್ಕೆ ಸಾಕ್ಷಿಯಾದನ್ಯೂಜಿಲೆಂಡ್‌ವಿರುದ್ಧದ ಮೂರನೇ ಟಿ–20 ಪಂದ್ಯದಲ್ಲಿ ಭಾರತ ತಂಡ 2ರನ್‌ಗಳ ಅಂತರದಿಂದ ಸೋಲು ಕಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ಆರಂಭಿಕ ಆಟಗಾರ್ತಿಸೋಫಿ ಡಿವೈನ್‌ಹಾಗೂ ಆ್ಯಮಿ ಸಟ್‌ವರ್ಥ್‌ವೇಟ್ ಬ್ಯಾಟಿಂಗ್ ಬಲದಿಂದ ನಿಗದಿತ 20 ಓವರ್‌ಗಳಲ್ಲಿ 161ರನ್ ಕಲೆ ಹಾಕಿತು. ಡಿವೈನ್ 72ಹಾಗೂ ಆ್ಯಮಿ 31ರನ್ ಗಳಿಸಿದರು.
ಈ ಮೊತ್ತ ಬೆನ್ನತ್ತಿದ ಭಾರತದ ಇನಿಂಗ್ಸ್‌ಗೆ ಸ್ಮೃತಿ ಮಂದಾನ ಆಟ ಕಳೆ ತಂದಿತು. 62 ಎಸೆತಗಳನ್ನು ಎದುರಿಸಿದ ಅವರು 12ಬೌಂಡರಿ 1 ಸಿಕ್ಸರ್ ಸಿಡಿಸಿ ರಂಜಿಸಿದರು. ಕೊನೆಯಲ್ಲಿ ಮಿಥಾಲಿ ರಾಜ್ ಹಾಗೂ ದೀಪ್ತಿ ಶರ್ಮಾ ಬಿರುಸಿನ ಆಟವಾಡಿದರಾದರೂ ಹರ್ಮನ್‌ಪ್ರೀತ್ ಕೌರ್ ಬಳಗ 159 ರನ್ ಗಳಿಸಲಷ್ಟೇ ಶಕ್ತವಾಯಿತು.
ಮೊದಲೆರಡು ಪಂದ್ಯಗಳಲ್ಲೂ ಸೋಲುಕಂಡಿದ್ದ ಕೌರ್ ಪಡೆ ಈ ಪಂದ್ಯ ಗೆಲ್ಲುವ ವಿಶ್ವಾಸದಲ್ಲಿ ಕಣಕ್ಕಿಳಿದಿತ್ತು.ಆದರೆ ಸರಣಿ‘ಕ್ಲೀನ್ ಸ್ವೀಪ್’ ಸಾಧನೆ ಮಾಡುವ ಆತಿಥೇಯರ ಲೆಕ್ಕಾಚಾರ ಕೈಗೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.