ADVERTISEMENT

ಐದು ವರ್ಷದಲ್ಲಿ 203 ಪಂದ್ಯಗಳು

​ಪ್ರಜಾವಾಣಿ ವಾರ್ತೆ
Published 21 ಜೂನ್ 2018, 18:51 IST
Last Updated 21 ಜೂನ್ 2018, 18:51 IST
ಚಿತ್ರ: ಬಿಸಿಸಿಐ
ಚಿತ್ರ: ಬಿಸಿಸಿಐ   

ಮುಂಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಮುಂಬರುವ ಕ್ರಿಕೆಟ್ ಟೂರ್ನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಭಾರತ ತಂಡವು ಮುಂದಿನ 5 ವರ್ಷಗಳ ಕಾಲ ಇತರ ಎಲ್ಲಾ ತಂಡಗಳಿಗಿಂತಲೂ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ.

ಐದು ವರ್ಷಗಳಲ್ಲಿ(2018-2023) ಬರೋಬ್ಬರಿ 203 ಕ್ರಿಕೆಟ್ ಪಂದ್ಯಗಳನ್ನು ಆಡಲಿದೆ. ಅದರಲ್ಲಿ 51 ಟೆಸ್ಟ್ ಪಂದ್ಯ, 83 ಏಕದಿನ ಪಂದ್ಯ ಹಾಗೂ 69 ಟಿ20 ಪಂದ್ಯಗಳಿವೆ. ನಂತರ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ಇದೆ.

ವಿಂಡೀಸ್ ತಂಡಒಟ್ಟಾರೆ 186 ಹಾಗೂ ಇಂಗ್ಲೆಂಡ್ ತಂಡ 175 ಪಂದ್ಯಗಳನ್ನು ಆಡಲಿದೆ.ಫ್ಯೂಚರ್ ಟೂರ್ ಪ್ರೊಗ್ರಾಂ (ಎಫ್‌ಟಿಪಿ) ನಿಯಮದಲ್ಲಿ ಐಸಿಸಿಯು ಈ ವೇಳಾಪಟ್ಟಿಯನ್ನು ಸಿದ್ಧಪಡಿಸಿದೆ.

ADVERTISEMENT

ಯಾವ ತಂಡಕ್ಕೆ ಎಷ್ಟು ಪಂದ್ಯಗಳು

ದೇಶ; ಪಂದ್ಯ; ಟೆಸ್ಟ್; ಏಕದಿನ;ಟ್ವೆಂಟಿ–20

ಭಾರತ; 203;51;83;69

ವೆಸ್ಟ್ ಇಂಡೀಸ್; 186;43;75;68

ಇಂಗ್ಲೆಂಡ್; 175;59;66;50

ಆಸ್ಟ್ರೇಲಿಯಾ; 174;47;68;59

ಪಾಕಿಸ್ತಾನ; 164;40;61;63

ದಕ್ಷಿಣ ಆಫ್ರಿಕಾ; 160;38;66;56

ಶ್ರೀಲಂಕಾ; 160;43;71;66

ಬಾಂಗ್ಲಾದೇಶ; 160;44;59;57

ನ್ಯೂಜಿಲೆಂಡ್; 159;38;62;59

ಐರ್ಲೆಂಡ್; 142;13;64;65

ಜಿಂಬಾಬ್ವೆ; 130;21;59;50

ಅಫ್ಗಾನಿಸ್ತಾನ; 109;13;51;45

ನೆದರ್‌ಲ್ಯಾಂಡ್ಸ್‌; 33;24;09

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.