ಬೆಂಗಳೂರು: ನಿತಿನ್ ಎಸ್ (130; 130 ಎಸೆತ, 12 ಬೌಂಡರಿ, 1 ಸಿಕ್ಸರ್) ಮತ್ತು ಅಬುಲ್ ಹಸನ್ ಖಲೀದ್ (178; 73 ಎ, 12 ಬೌಂ, 10 ಸಿ) ಅವರ ಅಮೋಘ ಬ್ಯಾಟಿಂಗ್ ಬಲದಿಂದ ಬೆಂಗಳೂರು ಅಕೇಷನಲ್ಸ್ ತಂಡ ವೈ.ಎಸ್.ರಾಮಸ್ವಾಮಿ ಸ್ಮಾರಕ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಜಯ ಗಳಿಸಿತು.
ಮಹಾರಾಣ ಕ್ರಿಕೆಟ್ ಕ್ಲಬ್ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಕೇಷನಲ್ಸ್ ಮೂರು ವಿಕೆಟ್‌ಗಳಿಗೆ 415 ರನ್ ಗಳಿಸಿತು. ಗುರಿ ಬೆನ್ನತ್ತಿದ ಎದುರಾಳಿ ತಂಡ 15ನೇ ಓವರ್‌ನಲ್ಲಿ 62 ರನ್‌ಗಳಿಗೆ ಆಲೌಟಾಯಿತು. ಅಬುಲ್ ಹಸನ್ ನಾಲ್ಕು ವಿಕೆಟ್ ಕೂಡ ಕಬಳಿಸಿದರು.
ಸಂಕ್ಷಿಪ್ತ ಸ್ಕೋರು: ಬೆಂಗಳೂರು ಅಕೇಷನಲ್ಸ್: 50 ಓವರ್‌ಗಳಲ್ಲಿ 3ಕ್ಕೆ 415 (ನಿತಿನ್ ಎಸ್ 130, ಸುಮಿತ್ ಧವನಿ 42, ಅಬುಲ್ ಹಸನ್ ಔಟಾಗದೆ 178); ಮಹಾರಾಣ ಕ್ರಿಕೆಟ್ ಕ್ಲಬ್: 14.3 ಓವರ್‌ಗಳಲ್ಲಿ 62 (ಸೂರಜ್ ಯಾದವ್ 4ಕ್ಕೆ2, ಒವಯಿಸ್ 16ಕ್ಕೆ2, ಅಬುಲ್ ಹಸನ್ 10ಕ್ಕೆ4). ಫಲಿತಾಂಶ: ಬೆಂಗಳೂರು ಅಕೇಷನಲ್ಸ್‌ಗೆ 353 ರನ್‌ಗಳ ಜಯ.
ಬೆಂಗಳೂರು ಸ್ಪೋರ್ಟ್ಸ್ ಕ್ರಿಕೆಟ್ ಕ್ಲಬ್: 33 ಓವರ್‌ಗಳಲ್ಲಿ 130ಕ್ಕೆ ಆಲೌಟ್ (ಅರುಣ್ ಕುಮಾರ್ 25, ಸುದೀಪ್ 35ಕ್ಕೆ4, ಸಿದಿಲ್ 31ಕ್ಕೆ4); ಡಾಲ್ಫಿನ್ ಕ್ರಿಕೆಟರ್ಸ್: 29.5 ಓವರ್‌ಗಳಲ್ಲಿ 5ಕ್ಕೆ 134 (ಹ್ಯೂಬರ್ಟ್ 41, ತರುಣ್ 31, ಆದಿತ್ಯ ರಾವ್ 21ಕ್ಕೆ3). ಫಲಿತಾಂಶ: ಡಾಲ್ಫಿನ್ ಕ್ರಿಕೆಟರ್ಸ್‌ಗೆ 5 ವಿಕೆಟ್‌ಗಳ ಗೆಲುವು.
ಗ್ಯಾರಿ ಕ್ರಿಕೆಟರ್ಸ್ 29.2 ಓವರ್‌ಗಳಲ್ಲಿ 87ಕ್ಕೆ ಆಲೌಟ್ (ಮೊಹಮ್ಮದ್ ಸೂಫಿಯಾನ್ 24ಕ್ಕೆ4, ರಿಷಭ್ 10ಕ್ಕೆ3, ನಿರಂಜನ್ 23ಕ್ಕೆ2); ಮಲ್ಲೇಶ್ವರಂ ಯುನೈಟೆಡ್ ಕ್ರಿಕೆಟ್ ಕ್ಲಬ್: 17.1 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 88 (ಶಶಾಂಕ್ ಔಟಾಗದೆ 27, ಮಯೂರ್ ಔಟಾಗದೆ 26): ಫಲಿತಾಂಶ: ಮಲ್ಲೇಶ್ವರಂ ಯುನೈಟೆಡ್‌ಗೆ 8 ವಿಕೆಟ್‌ಗಳ ಜಯ.
ಶಿರೂರ್ ಪಾರ್ಕ್ ಸ್ಪೋರ್ಟ್ಸ್ ಕ್ಲಬ್: 50 ಓವರ್‌ಗಳಲ್ಲಿ 3ಕ್ಕೆ 364 (ಅನೀಶ್ ಜಾನ್ ಔಟಾಗದೆ 141, ಅರವಿಂದ 40, ವಿನೋದ್ 59, ಮಂಜುನಾಥ್ ಔಟಾಗದೆ 53; ಸಿಬಿ ಥಾಮಸ್ 67ಕ್ಕೆ2); ಬ್ಲೇಜ್ ಕ್ರಿಕೆಟ್ ಕ್ಲಬ್: 30.2 ಓವರ್‌ಗಳಲ್ಲಿ 80ಕ್ಕೆ ಆಲೌಟ್ (ಮಂಜುನಾಥ್ ರೆಡ್ಡಿ 14ಕ್ಕೆ3, ವೇಣು ಕುಮಾರ್ 16ಕ್ಕೆ2, ರೂಪೇಶ್ 14ಕ್ಕೆ2, ವಿಘ್ನೇಶ್ ನಾಗ್ 4ಕ್ಕೆ2). ಫಲಿತಾಂಶ: ಶಿರೂರ್ ಪಾರ್ಕ್ ಸ್ಪೋರ್ಟ್ಸ್ ಕ್ಲಬ್‌ಗೆ 284 ರನ್‌ಗಳ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.