ADVERTISEMENT

ಢಾಕಾ ಟೆಸ್ಟ್‌: ವಿಂಡೀಸ್‌ಗೆ ಎನ್‌ಕ್ರುಮಾ ಬಾನರ್ ಆಸರೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 12:31 IST
Last Updated 11 ಫೆಬ್ರುವರಿ 2021, 12:31 IST
ಗುರುವಾರ ಬಾಂಗ್ಲಾದೇಶದ ಎದುರು ಅರ್ಧಶತಕ ಪೂರೈಸಿದ ಸಂಭ್ರಮದಲ್ಲಿ ವೆಸ್ಟ್ ಇಂಡೀಸ್‌ನ ಎನ್‌ಕ್ರುಮಾ ಬಾನರ್  –ಎಎಫ್‌ಪಿ ಚಿತ್ರ
ಗುರುವಾರ ಬಾಂಗ್ಲಾದೇಶದ ಎದುರು ಅರ್ಧಶತಕ ಪೂರೈಸಿದ ಸಂಭ್ರಮದಲ್ಲಿ ವೆಸ್ಟ್ ಇಂಡೀಸ್‌ನ ಎನ್‌ಕ್ರುಮಾ ಬಾನರ್  –ಎಎಫ್‌ಪಿ ಚಿತ್ರ   

ಢಾಕಾ: ಯುವಪ್ರತಿಭೆ ಎನ್‌ಕ್ರುಮಾ ಬಾನರ್ (ಬ್ಯಾಟಿಂಗ್ 74) ಬ್ಯಾಟಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ತಂಡವು ಗುರುವಾರ ಇಲ್ಲಿ ಆರಂಭವಾದ ಬಾಂಗ್ಲಾದೇಶ ಎದುರಿನ ಟೆಸ್ಟ್‌ನ ಮೊದಲ ದಿನ ಗೌರವಾರ್ಹ ಮೊತ್ತ ಗಳಿಸಿತು.

ಶೇರ್‌ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ವಿಂಡೀಸ್ ತಂಡವು ದಿನದಾಟದಂತ್ಯಕ್ಕೆ 90 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 223 ರನ್ ಗಳಿಸಿತು.

ನಾಯಕ ಕ್ರೇಗ್ ಬ್ರಾಥ್‌ವೇಟ್ (47; 122ಎ) ಮತ್ತು ಜಾನ್ ಕ್ಯಾಂಪ್‌ಬೆಲ್ (36; 68ಎ) ವಿಂಡೀಸ್‌ ತಂಡಕ್ಕೆ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 66 ರನ್ ಸೇರಿಸಿದರು. ಆದರೆ, ತೈಜುಲ್ ಇಸ್ಲಾಂ ಈ ಜೊತೆಯಾಟವನ್ನು ಮುರಿದರು. ಇವರ ಬೆನ್ನಹಿಂದೆಯೇ ಅಬು ಜಯೇದ್ ಅವರು ಶೇಯನ್ ಮೊಸೆಲಿ (7) ಮತ್ತು ಕೈಲ್ ಮೆಯರ್ಸ್ (5) ಅವರ ವಿಕೆಟ್ ಕಬಳಿಸಿದರು.

ADVERTISEMENT

ಇದರಿಂದಾಗಿ ವಿಂಡೀಸ್ ತಂಡವು ಆತಂಕ ಎದುರಿಸಿತ್ತು. ಈ ಹಂತದಲ್ಲಿ ಬಾನರ್ ಉತ್ತಮ ಇನಿಂಗ್ಸ್‌ ಕಟ್ಟಿದರು. ತಮ್ಮ ವೃತ್ತಿಜೀವನದ ಮೂರನೇ ಟೆಸ್ಟ್ ಆಡುತ್ತಿರುವ ಬಾನರ್ ಸುಂದರ ಹೊಡೆತಗಳನ್ನು ಪ್ರಯೋಗಿಸಿದರು. ತಾಳ್ಮೆಯ ಆಟದಿಂದ ಬೌಲರ್‌ಗಳಿಗೆ ಸವಾಲೊಡ್ಡಿದರು. 173 ಎಸೆತಗಳನ್ನು ಎದುರಿಸಿರುವ ಅವರು ಆರು ಬೌಂಡರಿಗಳನ್ನು ಗಳಿಸಿದ್ದಾರೆ. ಕ್ರೇಗ್ ಮೂರು ರನ್‌ಗಳ ಅಂತರದಿಂದ ಅರ್ಧಶತಕ ತಪ್ಪಿಸಿಕೊಂಡರು.

ಸಂಕ್ಷಿಪ್ತ ಸ್ಕೋರು: ವೆಸ್ಟ್ ಇಂಡೀಸ್: 90 ಓವರ್‌ಗಳಲ್ಲಿ 5ಕ್ಕೆ223 (ಕ್ರೇಗ್ ಬ್ರಾಥ್‌ವೇಟ್ 47, ಜಾನ್ ಕ್ಯಾಂಪ್‌ಬೆಲ್ 36, ಎನ್‌ಕ್ರುಮಾ ಬಾನರ್ ಬ್ಯಾಟಿಂಗ್ 74, ಜರ್ಮೈನ್ ಬ್ಲ್ಯಾಕ್‌ವುಡ್ 28, ಜೊಶುವಾ ಡಿಸಿಲ್ವಾ ಬ್ಯಾಟಿಂಗ್ 22, ಅಬು ಜಯೇದ್ 46ಕ್ಕೆ2, ತೈಜುಲ್ ಇಸ್ಲಾಂ 64ಕ್ಕೆ2) ಬಾಂಗ್ಲಾದೇಶ ವಿರುದ್ಧದ ಪಂದ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.