ADVERTISEMENT

ವಯಸ್ಸಿನಲ್ಲಿ ಕಿರಿಯರು ಆಟದಲ್ಲಿ ಅನುಭವಿಗಳು: ಹಾರ್ದಿಕ್ ಪಾಂಡ್ಯ

ಮಳೆಯಿಂದಾಗಿ ನ್ಯೂಜಿಲೆಂಡ್–ಭಾರತ ಪಂದ್ಯ ರದ್ದು

ಪಿಟಿಐ
Published 18 ನವೆಂಬರ್ 2022, 16:07 IST
Last Updated 18 ನವೆಂಬರ್ 2022, 16:07 IST
ಭಾರತ ತಂಡದ ಹಂಗಾಮಿ ಮುಖ್ಯ ಕೋಚ್ ವಿವಿಎಸ್ ಲಕ್ಷ್ಮಣ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ  –ಎಪಿ/ಪಿಟಿಐ ಚಿತ್ರ
ಭಾರತ ತಂಡದ ಹಂಗಾಮಿ ಮುಖ್ಯ ಕೋಚ್ ವಿವಿಎಸ್ ಲಕ್ಷ್ಮಣ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ  –ಎಪಿ/ಪಿಟಿಐ ಚಿತ್ರ   

ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಣ ಶನಿವಾರ ಇಲ್ಲಿ ನಡೆಯಬೇಕಿದ್ದ ಪಂದ್ಯವು ಮಳೆಯಿಂದಾಗಿ ರದ್ದಾಯಿತು.

ಈಚೆಗೆ ನಡೆದ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಉಭಯ ತಂಡಗಳೂ ನಾಲ್ಕರ ಘಟ್ಟದಲ್ಲಿ ಸೋತಿದ್ದವು. ಈ ಟಿ20 ಸರಣಿಯಲ್ಲಿ ಭಾರತ ತಂಡಕ್ಕೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕರಾಗಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಬಹುತೇಕ ಎಲ್ಲ ಅನುಭವಿ ಆಟಗಾರರು ವಿಶ್ರಾಂತಿ ಪಡೆದಿದ್ದಾರೆ. ಯುವ ಆಟಗಾರರ ಪಡೆಯು ಕಣಕ್ಕಿಳಿಯಲು ಸಿದ್ಧವಾಗಿದೆ.

‘ನಮ್ಮ ತಂಡದಲ್ಲಿರುವರು ವಯಸ್ಸಿನಲ್ಲಿ ಕಿರಿಯರಾಗಿದ್ದಾರೆ. ಆದರೆ ಅನುಭವದಲ್ಲಿ ಅಲ್ಲ. ಇವರೆಲ್ಲರೂ ಐಪಿಎಲ್‌ನಲ್ಲಿ ಬಹಳಷ್ಟು ಪಂದ್ಯಗಳನ್ನು ಆಡಿದ್ದಾರೆ. ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ಅನುಭವವೂ ಅವರಿಗೆ ಇದೆ’ ಎಂದು ಹಾರ್ದಿಕ್ ಹೇಳಿದರು.

ADVERTISEMENT

‘ಪರಿಸ್ಥಿತಿಗೆ ತಕ್ಕಂತೆ ವಿಭಿನ್ನ ರೀತಿಯ ಹೊಣೆಗಳನ್ನು ನಾನು ಹಾಗೂ ಹೆಚ್ಚು ಅನುಭವ ಇರುವ ಆಟಗಾರರು ನಿಭಾಯಿಸಬೇಕಿದೆ. ಹೊಸ ಹುಡುಗರಿಗೆ ಉತ್ತಮ ಅನುಭವ ಪಡೆಯಲು ಈ ಪ್ರವಾಸ ಸಹಾಯಕವಾಗಲಿದೆ. ಅವರಿಗೆ ಇದು ಬಹಳ ಮಹತ್ವದ ಅವಕಾಶವೂ ಹೌದು’ ಎಂದು ಹಾರ್ದಿಕ್ ಸುದ್ದಿಗಾರರಿಗೆ ಹೇಳಿದರು.

‘ವಿಶ್ವಕಪ್ ಟೂರ್ನಿ ಮುಗಿದುಹೋಗಿದೆ. ಬೇಸರವೆನೋ ಇದೆ. ಆದರೆ ಹಿಂದಿರುಗಿ ಹೋಗಿ ಬದಲಾಯಿಸಲು ಸಾಧ್ಯವಿಲ್ಲ. ಮುಂದೆ ಆಗಬೇಕಿರುವುದನ್ನು ನಿರ್ವಹಿಸುವುದು ಮುಖ್ಯ’ ಎಂದರು.

ಭಾರತ ತಂಡವು ಟಿ20 ಸರಣಿಯಲ್ಲಿ ಇನ್ನೆರಡು ಪಂದ್ಯಗಳನ್ನು ಆಡಲಿದೆ. ನಂತರ ಮೂರು ಏಕದಿನ ಪಂದ್ಯಗಳ ಸರಣಿ ನಡೆಯುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.