ಟಿಮ್ ಸೌಥಿ
(ರಾಯಿಟರ್ಸ್ ಚಿತ್ರ)
ಹ್ಯಾಮಿಲ್ಟನ್ (ಎಪಿ): ಮಿಚೆಲ್ ಸ್ಯಾಂಟನರ್ (85ಕ್ಕೆ 4) ಅವರ ಬೌಲಿಂಗ್ ದಾಳಿಯ ನೆರವಿನಿಂದ ಆತಿಥೇಯ ನ್ಯೂಜಿಲೆಂಡ್, ಇಲ್ಲಿ ನಡೆದ ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 423 ರನ್‌ಗಳಿಂದ ಮಣಿಸಿತು.
ಗೆಲುವಿಗೆ 658 ರನ್‌ಗಳ ಗುರಿ ಪಡೆದ ಆಂಗ್ಲರ ಪಡೆ 234 ರನ್‌ಗೆ ಕುಸಿಯಿತು. ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಕಿವೀಸ್‌ನ ವೇಗದ ಬೌಲರ್ ಟಿಮ್ ಸೌಥಿ ಅವರಿಗೆ ಈ ಮೂಲಕ ಗೆಲುವಿನ ವಿದಾಯ ದೊರೆಯಿತು.
34 ವರ್ಷ ವಯಸ್ಸಿನ ಸೌಥಿ 107 ಟೆಸ್ಟ್ ಪಂದ್ಯಗಳಲ್ಲಿ 391 ವಿಕೆಟ್ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.