ADVERTISEMENT

IND vs NZ | ಮಿಂಚಿದ ಮನೀಷ್, ರಾಹುಲ್: ಭಾರತಕ್ಕೆ ಮತ್ತೊಂದು ಸೂಪರ್ ಜಯ

ನಾಲ್ಕನೇ ಟಿ20 ಪಂದ್ಯ

​ಪ್ರಜಾವಾಣಿ ವಾರ್ತೆ
Published 31 ಜನವರಿ 2020, 12:06 IST
Last Updated 31 ಜನವರಿ 2020, 12:06 IST
   

ವೆಲ್ಲಿಂಗ್ಟನ್‌:ನ್ಯೂಜಿಲೆಂಡ್‌ ತಂಡದೆದುರು ಮತ್ತೊಂದು ‘ಸೂಪರ್‌ ಓವರ್‌’ಗೆ ಸಾಕ್ಷಿಯಾದಟಿ20 ಸರಣಿಯನಾಲ್ಕನೇ ಪಂದ್ಯವನ್ನೂ ಭಾರತ ಗೆದ್ದುಕೊಂಡಿತು. ಹೀಗಾಗಿ ಐದು ಪಂದ್ಯಗಳ ಸರಣಿಯಲ್ಲಿ ಭಾರತ 4–0 ಯಿಂದ ಮುನ್ನಡೆಯಿತು.

ಇಲ್ಲಿನ ಸ್ಕೈ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದಭಾರತ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕಂಡು165 ರನ್ ಗಳಿಸಿತ್ತು. ಈ ಮೊತ್ತ ಬೆನ್ನಟ್ಟಿದ ನ್ಯೂಜಿಲೆಂಡ್‌ ಕೂಡ ಇಷ್ಟೇ ರನ್‌ ಗಳಿಸಿದ್ದರಿಂದ ಸೂಪರ್ ಓವರ್‌ ಮೊರೆ ಹೊಗಲಾಗಿತ್ತು.

ಸೂಪರ್‌ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್‌ 13 ರನ್ ಗಳಿಸಷ್ಟೇ ಶಕ್ತವಾಯಿತು.ಈ ಮೊತ್ತವನ್ನು ಭಾರತ ಕೇವಲ ಐದು ಎಸೆತಗಳಲ್ಲೇ ಮುಟ್ಟಿ ಗೆಲುವಿನ ನಗೆ ಬೀರಿತು. ಮೊದಲೆರಡು ಎಸೆತಗಳಲ್ಲೇ 10 ರನ್‌ ಗಳಿಸಿದ ಕೆ.ಎಲ್‌ ರಾಹುಲ್‌ ಭಾರತದ ಜಯವನ್ನು ಖಾತ್ರಿ ಪಡಿಸಿದ್ದರು.

ಆಸರೆಯಾಗಿದ್ದ ಪಾಂಡೆ
ಟಾಸ್‌ ಸೋತರೂಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ.ರೋಹಿತ್‌ ಬದಲು ಕೆ.ಎಲ್‌. ರಾಹುಲ್‌ ಜೊತೆ ಇನಿಂಗ್ಸ್‌ ಆರಂಭಿಸಿದಸಂಜು ಸ್ಯಾಮ್ಸನ್‌ ಕೇವಲ 8 ರನ್‌ ಗಳಿಸಿ ಔಟಾದರು. ಬಳಿಕ ಬಂದ ನಾಯಕ ವಿರಾಟ್‌ ಕೊಹ್ಲಿ (11), ಶ್ರೇಯಸ್‌ ಅಯ್ಯರ್‌ (1), ಶಿವಂ ದುಬೆ (12)ಕೂಡಹೆಚ್ಚು ಹೊತ್ತು ನಿಲ್ಲಲಿಲ್ಲ.ವಾಷಿಂಗ್ಟನ್‌ ಸುಂದರ್‌ ಸೊನ್ನೆ ಸುತ್ತಿದರು.

ಉತ್ತಮವಾಗಿ ಆಡುತ್ತಿದ್ದರಾಹುಲ್‌34 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಈ ವೇಳೆಕೇವಲ 88 ರನ್‌ ಗಳಿಸುವಷ್ಟರಲ್ಲಿ ಪ್ರಮುಖ ಆರು ವಿಕೆಟ್‌ ಕಳೆದುಕೊಂಡಿದ್ದ ಕೊಹ್ಲಿ ಪಡೆಗೆ ಮನೀಷ್‌ ಪಾಂಡೆ ಆಸರೆಯಾಗಿದ್ದರು. ಅವರು 36 ಎಸೆತಗಳಲ್ಲಿ 50 ರನ್‌ ಗಳಿಸಿ ಕೊಹ್ಲಿ ಪಡೆಗೆ ನೆರವಾಗಿದ್ದರು.

ಮೂರನೇ ಪಂದ್ಯದಲ್ಲೂಸೂಪರ್‌ ಓವರ್‌
ಸರಣಿಯ ಮೂರನೇ ಪಂದ್ಯವೂ ಟೈ ಆಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 179 ರನ್‌ ಗಳಿಸಿತ್ತು. ಮೊತ್ತ ಬೆನ್ನಟ್ಟಿದ್ದ ಕಿವೀಸ್‌ ಕೂಡ 179 ರನ್ ಗಳಿಸಿತ್ತು.

ಹೀಗಾಗಿ ನಡೆದ ಸೂಪರ್‌ ಓವರ್‌ನಲ್ಲಿ ಮೊದಲು ಬ್ಯಾಟ್‌ ಬೀಸಿದ ನ್ಯೂಜಿಲೆಂಡ್‌17 ರನ್‌ ಗಳಿಸಿತ್ತು. ಈ ಮೊತ್ತದೆದುರು ಭಾರತ 20 ರನ್‌ ಗಳಿಸಿ ಗೆಲುವಿನ ನಗೆ ಬೀರಿತ್ತು. ರೋಹಿತ್‌ ಶರ್ಮಾ ಎರಡು ಸಿಕ್ಸರ್ ಸಿಡಿಸಿ ಮಿಂಚಿದ್ದರು.

ಕಳೆದ ಪಂದ್ಯದ ‘ಸೂಪರ್‌’ ಹೀರೋಗಳಾದ ರೋಹಿತ್‌ ಶರ್ಮಾ, ಮೊಹಮದ್‌ ಶಮಿ ಮತ್ತು ರವೀಂದ್ರ ಜಡೇಜಾ ಬದಲು ಸ್ಯಾಮ‌್ಸನ್‌, ವಾಷಿಂಗ್ಟನ್‌ ಸುಂದರ್‌, ನವದೀಪ್‌ ಶೈನಿ ಅವರಿಗೆ ಈ ಪಂದ್ಯದಲ್ಲಿಆಡುವ ಹನ್ನೊಂದರ ಬಳಗದಲ್ಲಿಅವಕಾಶ ನೀಡಲಾಗಿತ್ತು.

ನ್ಯೂಜಿಲೆಂಡ್‌ ಪರ ಕೇನ್‌ ವಿಲಿಯಮ್ಸ್‌ನ್‌ ಹೊರಗುಳಿದಿದ್ದು,ಟಿಮ್‌ ಸೌಥಿ ತಂಡಮುನ್ನಡೆಸುತ್ತಿದ್ದಾರೆ. ಕೇನ್‌ ಹಾಗೂ ಕಾಲಿನ್‌ಡಿ ಗ್ರಾಂಡ್‌ಹೋಮ್‌ ಬದಲು ಟಾಮ್‌ ಬ್ರೂಸ್‌ ಮತ್ತುಡರೇಲ್‌ ಮಿಚೆಲ್‌ ತಂಡ ಕೂಡಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.