ADVERTISEMENT

ಏಕದಿನ ತಂಡಕ್ಕೆ ಶುಭಮನ್ ಗಿಲ್ ನಾಯಕ: ಗಂಗೂಲಿ ಹೇಳಿದ್ದೇನು?

ಪಿಟಿಐ
Published 9 ಅಕ್ಟೋಬರ್ 2025, 12:40 IST
Last Updated 9 ಅಕ್ಟೋಬರ್ 2025, 12:40 IST
ಗಂಗೂಲಿ
ಗಂಗೂಲಿ   

ಕೋಲ್ಕತ್ತ: ಭಾರತ ಏಕದಿನ ತಂಡದ ನಾಯಕತ್ವವನ್ನು ರೋಹಿತ್ ಶರ್ಮಾರಿಂದ ದಿಢೀರನೆ ಶುಭಮನ್ ಗಿಲ್ ಅವರಿಗೆ ಹಸ್ತಾಂತರಿಸಲಾಗಿದೆ. ಈ ನಿರ್ಧಾರದ ಕುರಿತು ಅನೇಕ ಮಾಜಿ ಆಟಗಾರರು, ಕ್ರಿಕೆಟ್ ಪಂಡಿತರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ನಡುವೆ ಮಾಜಿ ನಾಯಕ ಸೌರವ್ ಗಂಗೂಲಿ ಆಯ್ಕೆ ಸಮಿತಿ ನಿರ್ಧಾರ ನ್ಯಾಯಯುತವಾಗಿದೆ ಎಂದು ಹೇಳಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಮತ್ತು ಟಿ20 ವಿಶ್ವಕಪ್ ವಿಜೇತ ನಾಯಕನಾಗಿರುವ ರೋಹಿತ್ ಶರ್ಮಾ ಅವರ ಜೊತೆಗೆ ಚರ್ಚಿಸಿಯೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗಂಗೂಲಿ ಹೇಳಿದ್ದಾರೆ.

ನಾಯಕತ್ವ ಬದಲಾವಣೆಯ ಕುರಿತು ಪ್ರತಿಕ್ರಿಯೆ ನೀಡಿರುವ ಗಂಗೂಲಿ, 'ರೋಹಿತ್ ಅವರೊಂದಿಗೆ ಸಮಾಲೋಚಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಎಂದು ನಾನು ಭಾವಿಸುತ್ತೇನೆ, ಒಳಗೆ ಏನು ನಡೆದಿದೆ ಎಂಬುದು ನನಗೆ ಸ್ಪಷ್ಟವಾಗಿ ತಿಳಿದಿಲ್ಲ' ಎಂದು ಅನ್ನಪೂರ್ಣ ಸ್ನ್ಯಾಕ್ಸ್‌ನ ರಾಷ್ಟ್ರೀಯ ಬ್ರಾಂಡ್ ರಾಯಭಾರಿಯಾಗಿ ನೇಮಕಗೊಂಡ ಬಳಿಕ ಅವರು ತಿಳಿಸಿದರು.

ADVERTISEMENT

'ಎಲ್ಲೋ ಒಂದು ಹಂತದಲ್ಲಿ ಇದು ನ್ಯಾಯಯುತ ಆಯ್ಕೆ ಎಂದು ನಾನು ಭಾವಿಸುತ್ತೇನೆ. ರೋಹಿತ್ ಆಟವಾಡುವುದನ್ನು ಮುಂದುವರಿಸಬಹುದು ಮತ್ತು ಅವರು ತಂಡದಲ್ಲಿ ಇರುವಾಗಲೇ ಹೊಸ ನಾಯಕನನ್ನು ಸಿದ್ಧಪಡಿಸಬಹುದು. ಹಾಗಾಗಿ ಈ ಬದಲಾವಣೆಯಿಂದ ನನಗೆ ಯಾವುದೇ ಸಮಸ್ಯೆ ಕಾಣುತ್ತಿಲ್ಲ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.