ADVERTISEMENT

ವಿವರಣೆ ನೀಡಿದ ಸೌರವ್‌ ಗಂಗೂಲಿ

ಹಿತಾಸಕ್ತಿ ಸಂಘರ್ಷದ ಆರೋಪ: ತೀರ್ಪು ಕಾಯ್ದಿರಿಸಿದ ಡಿ.ಕೆ. ಜೈನ್‌

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 20:08 IST
Last Updated 20 ಏಪ್ರಿಲ್ 2019, 20:08 IST
ಸೌರವ್‌ ಗಂಗೂಲಿ
ಸೌರವ್‌ ಗಂಗೂಲಿ   

ನವದೆಹಲಿ: ಸೌರವ್‌ ಗಂಗೂಲಿ ವಿರುದ್ಧದಹಿತಾಸಕ್ತಿ ಸಂಘರ್ಷ ಆರೋಪದ ಕುರಿತು ಬಿಸಿಸಿಐ ಒಂಬುಡ್ಸ್‌ಮನ್‌ ಡಿ.ಕೆ.ಜೈನ್ ಅವರು ತೀರ್ಪನ್ನು ಕಾಯ್ದಿರಿಸಿದ್ದಾರೆ.

ಶುಕ್ರವಾರ ನಡೆದ ವಿಚಾರಣೆಗೆ ಹಾಜರಾಗಿದ್ದದೂರುದಾರರು ಮತ್ತು ಗಂಗೂಲಿ ಅವರಿಂದ ವಿವರಣೆ ಆಲಿಸಿದ ಜೈನ್‌, ಇಬ್ಬರಿಂದಲೂ ಲಿಖಿತ ವಿವರಣೆ ಕೇಳಿದ್ದಾರೆ.

‘ತೀರ್ಪನ್ನು ಪ್ರಕಟಿಸುವ ಮುಂಚೆ ವಿವರಣೆ ಪಡೆದಿದ್ದೇನೆ. ಆದರೆ, ಇಬ್ಬರೂ ಲಿಖಿತ ವಿವರಣೆ ಸಲ್ಲಿಸಬೇಕು. ಸೂಕ್ತ ಸಂದರ್ಭದಲ್ಲಿ ನಿರ್ಧಾರ ಹೊರಬರಲಿದೆ’ ಎಂದು ಬಿಸಿಸಿಐ ನೀತಿ ಸಮಿತಿಮುಖ್ಯಸ್ಥರೂ ಆಗಿರುವ ಡಿ.ಕೆ.ಜೈನ್‌ ಹೇಳಿದ್ದಾರೆ.

ADVERTISEMENT

ಕೋಲ್ಕತ್ತದ ರಂಜೀತ್‌ ಸೀಲ್‌, ಅಭಿಜಿತ್‌ ಮುಖರ್ಜಿ ಮತ್ತು ಭಾಸ್ವತಿ ಶಾಂತುವ ಅವರು, ‘ಸೌರವ್‌ ಗಂಗೂಲಿ, ಬಂಗಾಳ ಕ್ರಿಕೆಟ್‌ ಸಂಸ್ಥೆಯ (ಸಿಎಬಿ) ಅಧ್ಯಕ್ಷ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿತಾಸಕ್ತಿ ಸಂಘರ್ಷಕ್ಕೆ ಒಳಗಾಗಿರುವ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ದೂರು ನೀಡಿದ್ದರು.

ಗಂಗೂಲಿ ಬೆಂಬಲಕ್ಕೆ ಬಿಸಿಸಿಐ: ಹಿತಾಸಕ್ತಿ ಸಂಘರ್ಷ ಆರೋಪ ವಿವಾದದಲ್ಲಿ ಸೌರವ್ ಗಂಗೂಲಿ ಬೆಂಬಲಕ್ಕೆ ಬಿಸಿಸಿಐ ನಿಂತಿದೆ.

ಒಂಬುಡ್ಸ್‌ಮನ್‌ ಜೈನ್‌ ಅವ ರೊಂದಿಗೆ ಚರ್ಚಿಸಿ ಪ್ರಕರಣವನ್ನು ಶೀಘ್ರವೇ ಇತ್ಯರ್ಥಗೊಳಿಸುವ ಭರವಸೆ ವ್ಯಕ್ತಪಡಿಸಿದೆ.38 (3a) ನಿಯಮಾವಳಿ ಅಡಿ ಇದು ಸುಲಭವಾಗಿ ನಿರ್ವಹಿಸಬಹುದಾದ ಪ್ರಕರಣ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.