ADVERTISEMENT

Video | ಐತಿಹಾಸಿಕ ಕ್ಯಾಚ್‌ ಎಂದು ಕಾಮೆಂಟೇಟರ್‌ ಬಣ್ಣಿಸಿದ ಜಡೇಜಾ ಕ್ಯಾಚ್‌ ಇದು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 18:24 IST
Last Updated 1 ಮಾರ್ಚ್ 2020, 18:24 IST
ರವೀಂದ್ರ ಜಡೇಜಾ ಅವರು ಕ್ಯಾಚ್‌ ಹಿಡಿಯುತ್ತಿರುವ ದೃಶ್ಯ
ರವೀಂದ್ರ ಜಡೇಜಾ ಅವರು ಕ್ಯಾಚ್‌ ಹಿಡಿಯುತ್ತಿರುವ ದೃಶ್ಯ   

ಭಾನುವಾರ ಇಡೀ ದಿನ ಸಾಮಾಜಿಕ ಜಾಲತಾಣಗಳಲ್ಲಿ ಆಲ್‌ರೌಂಡರ್ ರವೀಂದ್ರ ಜಡೇಜ ಅವರ ಕುರಿತದ್ದೇ ಚರ್ಚೆ. ನ್ಯೂಜಿಲೆಂಡ್‌ನ ಬ್ಯಾಟ್ಸ್‌ಮನ್ ನೀಲ್ ವಾಗ್ನರ್ ಅವರ ಕ್ಯಾಚ್‌ ಅನ್ನು ’ಸೂಪರ್‌ ಮ್ಯಾನ್‌’ ರೀತಿಯಲ್ಲಿ ಪಡೆದ ಜಡೇಜ ಈಗ ಅಪಾರ ಜನಮೆಚ್ಚುಗೆ ಗಳಿಸುತ್ತಿದ್ದಾರೆ.

72ನೇ ಓವರ್‌ನಲ್ಲಿ ಶಮಿಯ ಎಸೆತವನ್ನು ನೀಲ್ ವಾಗ್ನರ್ ಅವರು ಸಿಕ್ಸರ್‌ಗೆ ಎತ್ತುವ ಪ್ರಯತ್ನ ಮಾಡಿದರು. ಆದರೆ ಡೀಪ್ ಸ್ಕ್ವೇರ್‌ ಬಳಿ ಇದ್ದ ಫೀಲ್ಡರ್ ಜಡೇಜ ಅನೂಹ್ಯ ರೀತಿಯಲ್ಲಿ ಮೇಲಕ್ಕೆ ಜಿಗಿದು ಎಡಗೈಯಲ್ಲಿ ಚೆಂಡನ್ನು ಹಿಡಿತಕ್ಕೆ ಪಡೆದರು. ಮೈದಾನದಲ್ಲಿದ್ದ ಫೀಲ್ಡರ್‌ಗಳು ಮತ್ತು ವಾಗ್ನರ್ ಒಂದರೆಕ್ಷಣ ಚಕಿತರಾಗಿ ನಿಂತರು.

ಜಡೇಜ ಸಾಹಸಮಯ ಕ್ಯಾಚ್‌ನ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಜನಮೆಚ್ಚುಗೆ ಗಳಿಸುತ್ತಿವೆ. ಕ್ರಿಕೆಟ್‌ ಇತಿಹಾಸದಲ್ಲಿ ದಾಖಲಾದ (ಎಲ್ಲ ಮಾದರಿಗಳು) ಅದ್ಭುತ ಕ್ಯಾಚ್‌ಗಳ ಸಾಲಿನಲ್ಲಿ ಜಡೇಜ ಸಾಹಸವೂ ಒಂದು ಎಂದು ಬಣ್ಣಿಸಲಾಗುತ್ತಿದೆ.

ADVERTISEMENT
ಕ್ಯಾಚ್‌ ನಂತರ ಜಡೇಜಾ ಸಂಭ್ರಮ
ತಂಡದ ಸದಸ್ಯರಿಂದ ಜಡೇಜಾಗೆ ಪ್ರಶಂಸೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.