ADVERTISEMENT

ನಮ್ಮದು ವಿಶೇಷ ತಂಡ, ಭಾರತ ಸೇರಿ ಯಾರನ್ನಾದರೂ ಸೋಲಿಸುವ ಸಾಮರ್ಥ್ಯವಿದೆ: ಪಾಕ್ ನಾಯಕ

ಪಿಟಿಐ
Published 26 ಸೆಪ್ಟೆಂಬರ್ 2025, 7:38 IST
Last Updated 26 ಸೆಪ್ಟೆಂಬರ್ 2025, 7:38 IST
<div class="paragraphs"><p>ಸಲ್ಮಾನ್‌ ಅಲಿ ಆಘಾ –ಎಕ್ಸ್‌ ಚಿತ್ರ</p></div>

ಸಲ್ಮಾನ್‌ ಅಲಿ ಆಘಾ –ಎಕ್ಸ್‌ ಚಿತ್ರ

   

ದುಬೈ: ಇಂತಹ ಗೆಲುವುಗಳು ನಮ್ಮದು ವಿಶೇಷ ತಂಡ ಎಂಬುದನ್ನು ಸಾಬೀತುಪಡಿಸುತ್ತವೆ. ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತ ಸೇರಿದಂತೆ ಯಾವುದೇ ತಂಡವನ್ನು ಸೋಲಿಸುವ ಸಾಮರ್ಥ್ಯ ತಮ್ಮ ತಂಡಕ್ಕೆ ಇದೆ ಎಂದು ಬಾಂಗ್ಲಾದೇಶ ವಿರುದ್ಧದ ಪಂದ್ಯದ ಬಳಿಕ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ಹೇಳಿದರು.

ಗುರುವಾರ ನಡೆದ ಸೂಪರ್–4 ಹಂತದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಬಾಂಗ್ಲಾದೇಶದ ವಿರುದ್ಧ ಕೇವಲ 135 ರನ್‌ಗಳ ಸಾಧಾರಣ ಗುರಿಯನ್ನು ಕಾಪಾಡಿಕೊಂಡು 11 ರನ್‌ಗಳ ಜಯ ಸಾಧಿಸಿತು. ಆ ಮೂಲಕ ಏಷ್ಯಾ ಕಪ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

ADVERTISEMENT

ಪಂದ್ಯದ ಬಳಿಕ ಮಾತನಾಡಿದ ಪಾಕಿಸ್ತಾನ ನಾಯಕ ಸಲ್ಮಾನ್ ಆಘಾ, ‘ಈ ರೀತಿಯ ಪಂದ್ಯಗಳನ್ನು ಗೆಲ್ಲುತ್ತೇವೆ ಅಂದರೆ ನಮ್ಮದು ವಿಶೇಷ ತಂಡವಾಗಿರಲೇಬೇಕು. ಎಲ್ಲರೂ ಚೆನ್ನಾಗಿ ಆಡಿದರು. ಬ್ಯಾಟಿಂಗ್‌ನಲ್ಲಿ ಸ್ವಲ್ಪ ಸುಧಾರಣೆಯಾಗಬೇಕಿದೆ, ಅದಕ್ಕೆ ಒತ್ತು ಕೊಟ್ಟು ಕೆಲಸ ಮಾಡುತ್ತೇವೆ‘ ಎಂದರು.

ಇನ್ನು ಭಾರತ ವಿರುದ್ಧದ ಫೈನಲ್ ಪಂದ್ಯದ ಕುರಿತು ಮಾತನಾಡಿದ ಅವರು, ‘ಭಾನುವಾರದ ಪಂದ್ಯಕ್ಕಾಗಿ ತುಂಬಾ ಉತ್ಸುಕರಾಗಿದ್ದೇವೆ. ನಾವು ಏನು ಮಾಡಬೇಕು ಎಂಬುದು ನಮಗೆ ತಿಳಿದಿದೆ. ನಮ್ಮದು ಭಾರತ ಸೇರಿದಂತೆ ಯಾವುದೇ ತಂಡವನ್ನು ಸೋಲಿಸುವಷ್ಟು ಬಲಿಷ್ಠ ತಂಡವಾಗಿದೆ‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.