ADVERTISEMENT

ಪಾಕಿಸ್ತಾನದ ಜೆರ್ಸಿಯಲ್ಲಿ ಭಾರತದ ಹೆಸರು ಉಲ್ಲೇಖ; ವಿವಾದ ಸುಖಾಂತ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಅಕ್ಟೋಬರ್ 2021, 10:13 IST
Last Updated 16 ಅಕ್ಟೋಬರ್ 2021, 10:13 IST
ಚಿತ್ರ ಕೃಪೆ: Twitter/@TheRealPCB
ಚಿತ್ರ ಕೃಪೆ: Twitter/@TheRealPCB   

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್‌ಗಾಗಿ ಪಾಕಿಸ್ತಾನ ಕ್ರಿಕೆಟ್ ತಂಡದ ನೂತನ ಜೆರ್ಸಿಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅನಾವರಣಗೊಳಿಸಿದೆ.

ಪಾಕಿಸ್ತಾನದ ಜೆರ್ಸಿಯಲ್ಲಿ ವಿಶ್ವಕಪ್ ಆತಿಥ್ಯ ರಾಷ್ಟ್ರವಾದ ಭಾರತದ ಹೆಸರನ್ನು ಉಲ್ಲೇಖಿಸುವ ಮೂಲಕ ಭುಗಿಲೆದ್ದಿರುವ ವಿವಾದವು ಸುಖಾಂತ್ಯ ಕಂಡಿದೆ.

ಕೆಲವು ದಿನಗಳ ಹಿಂದೆಯಷ್ಟೇ ಪಾಕಿಸ್ತಾನದ ಸಮವಸ್ತ್ರದಲ್ಲಿ 'ಇಂಡಿಯಾ 2021' ಬದಲು 'ಯುಎಇ 2021' ಎಂದು ಮುದ್ರಿಸಲಾಗಿದೆ ಎಂಬ ಕುರಿತು ಆಪಾದನೆಗಳು ಕೇಳಿಬಂದಿದ್ದವು. ಸಾಮಾಜಿಕ ಮಾಧ್ಯಮಗಳಲ್ಲೂ ಪಾಕಿಸ್ತಾನದ ವಿರುದ್ಧ ಟ್ರೋಲ್‌ಗಳು ಹರಿದಾಡಿದ್ದವು.

ಈ ನಡುವೆ ಪಿಸಿಬಿಯು ಶುಕ್ರವಾರ ಅನಾವರಣಗೊಳಿಸಿರುವ ಪಾಕ್ ಜೆರ್ಸಿಯಲ್ಲಿ 'ಇಂಡಿಯಾ 2021' ಉಲ್ಲೇಖಿಸಿರುವುದು ಕಂಡುಬಂದಿದೆ. ಜೆರ್ಸಿ ವಿಡಿಯೊದಲ್ಲಿ ಹೆಸರು ಸ್ಪಷ್ಟವಾಗಿ ಗೋಚರಿಸಿದೆ.

ಭಾರತದಲ್ಲಿ ನಡೆಯಬೇಕಾಗಿದ್ದ ಟ್ವೆಂಟಿ-20 ವಿಶ್ವಕಪ್, ಕೋವಿಡ್ ಹಿನ್ನೆಲೆಯಲ್ಲಿ ಯುಎಇ ಹಾಗೂ ಒಮಾನ್‌‌ನಲ್ಲಿ ಆಯೋಜಿಸಲು ಬಿಸಿಸಿಐ ನಿರ್ಧರಿಸಿತ್ತು.

ಟಿ20 ವಿಶ್ವಕಪ್‌ನಲ್ಲಿ ಅಕ್ಟೋಬರ್ 24 ಭಾನುವಾರ ನಡೆಯಲಿರುವ ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನದ ಸವಾಲನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.