ಕರಾಚಿ: ಪಾಕಿಸ್ತಾನದ ಅತಿ ಹಿರಿಯ ಟೆಸ್ಟ್ ಆಟಗಾರ ವಝೀರ್ ಮೊಹಮ್ಮದ್ (95) ಅವರು ಸೋಮವಾರ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಿಧನರಾದರು.
ಮೊಹಮ್ಮದ್ ಸಹೋದರರಲ್ಲಿ ಅವರು ಹಿರಿಯರು. ಹನೀಫ್ ಮೊಹಮ್ಮದ್, ಮುಷ್ತಾಕ್ ಮೊಹಮ್ಮದ್ ಮತ್ತು ಸಾದಿಕ್ ಮೊಹಮ್ಮದ್ ಅವರ ತಮ್ಮಂದಿರು. ವಝೀರ್ ಅವರಂತೆ ಈ ಮೂವರೂ ಟೆಸ್ಟ್ ಪಂದ್ಯಗಳನ್ನು ಆಡಿದವರು.
1952ರಲ್ಲಿ ಪಾಕಿಸ್ತಾನ ಮೊದಲ ಬಾರಿ ಭಾರತ ವಿರುದ್ಧ ತನ್ನ ಚೊಚ್ಚಲ ಟೆಸ್ಟ್ ಆಡಿದ್ದಾಗ ಬ್ಯಾಟರ್ ವಝೀರ್ ಆ ತಂಡದಲ್ಲಿದ್ದರು. 1952 ರಿಂದ 59ರವರೆಗಿನ ಅವಧಿಯಲ್ಲಿ ಅವರು 20 ಟೆಸ್ಟ್‌ಗಳನ್ನು ಆಡಿದ್ದರು.
ನಿವೃತ್ತಿ ನಂತರ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಸಲಹೆಗಾರರಾಗಿದ್ದರು. ನಂತರ ಇಂಗ್ಲೆಂಡ್‌ನಲ್ಲಿ ನೆಲೆ ಕಂಡುಕೊಂಡಿದ್ದರು.
ಪೋರ್ಟ್ ಆಫ್ ಸ್ಪೇನ್‌ನಲ್ಲಿ ಅವರು ವೆಸ್ಟ್ ಇಂಡೀಸ್ ವಿರುದ್ಧ ದೀರ್ಘ ಇನಿಂಗ್ಸ್ ಆಡಿ 189 ರನ್ ಹೊಡೆದಿದ್ದು ಅವರ ಅವಿಸ್ಮರಣೀಯ ಇನಿಂಗ್ಸ್ ಆಗಿದೆ. ಆ ಪಂದ್ಯವನ್ನು ಪಾಕ್ ಪಂದ್ಯ ಗೆದ್ದಿತ್ತು. 1954ರಲ್ಲಿ ಓವಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು 24 ರನ್‌ಗಳಿಂದ ಪಾಕಿಸ್ತಾನ ಸೋಲಿಸಿದ ವೇಳೆಯೂ ಅವರು ಗಳಿಸಿದ್ದ ಅಜೇಯ 42 ತಂಡದ ಗರಿಷ್ಠ ವೈಯಕ್ತಿ ಮೊತ್ತವೆನಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.