ADVERTISEMENT

T20 World Cup| ಹೆದರಿಕೊಂಡು ಪಾಕಿಸ್ತಾನ ಬೆದರಿಕೆ ಹಿಂಪಡೆದಿದೆ: ಒಮರ್ ಅಬ್ದುಲ್ಲಾ

ಪಿಟಿಐ
Published 10 ಫೆಬ್ರುವರಿ 2026, 13:04 IST
Last Updated 10 ಫೆಬ್ರುವರಿ 2026, 13:04 IST
   

ಜಮ್ಮು: ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಂದ್ಯವನ್ನು ಬಹಿಷ್ಕರಿಸುವುದಾಗಿ ಹೇಳಿದ್ದ ಪಾಕಿಸ್ತಾನವು, ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಇದನ್ನು ವ್ಯಂಗ್ಯ ಮಾಡಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ‘ಬೆದರಿಕೆ ಹಾಕುವವರು ಅದಕ್ಕೆ ಬದ್ಧರಾಗಿರಬೇಕು, ಭಯಬಿದ್ದು ಅದನ್ನು ಹಿಂಪಡೆಯಬಾರದು’ ಎಂದಿದ್ದಾರೆ.

ಭಾರತ ವಿರುದ್ಧ ಪಂದ್ಯವಾಡಬಾರದು ಎಂದು ಪಾಕಿಸ್ತಾನವೇ ನಿರ್ಧರಿಸಿತ್ತು. ಇದೀಗ ಅವರ ನಿಲುವನ್ನು ಅವರೇ ಹಿಂಪಡೆದಿದ್ದಾರೆ. ತನ್ನ ನಿಲುವಿಗೆ ಬದ್ಧವಾಗಿರಲು ಸಾಧ್ಯವಿಲ್ಲದವರು, ಬೆದರಿಕೆ ಹಾಕಲೇಬಾರದು ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಟೂರ್ನಿಯ ವೇಳಾಪಟ್ಟಿ ಬಿಡುಗಡೆಯಾದ ನಂತರ ಅವರು ನಾಟಕ ಮಾಡುವುದನ್ನು ಬಿಟ್ಟು, ಸುಮ್ಮನೆ ಬಂದು ಪಂದ್ಯವಾಡಿ ಹೋಗಬೇಕು. ಪಂದ್ಯದ ವೇಳೆ ಏನಾಗಬೇಕೋ ಅದೇ ಆಗುತ್ತದೆ ಎಂದಿದ್ದಾರೆ.

ADVERTISEMENT

ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ನಡೆಯುತ್ತಿರುವ ಚುಟುಕು ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ವಿರುದ್ಧದ ಲೀಗ್‌ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಹೇಳಿತ್ತು. ಐಸಿಸಿ ನಡುವಿನ ವರ್ಚುವಲ್ ಸಭೆಯ ನಂತರ, ಪಾಕ್ ತನ್ನ ನಿರ್ಧಾರವನ್ನು ಬದಲಿಸಿಕೊಂಡಿದೆ.

ಇದೀಗ ಪಾಕಿಸ್ತಾನವು ಫೆ.15ರಂದು ಟೀಂ ಇಂಡಿಯಾ ವಿರುದ್ಧ ಕೋಲಂಬೊದಲ್ಲಿ ಪಂದ್ಯವಾಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.