ADVERTISEMENT

ಬಲೂಚ್‌ ಕಾರ್ಯಕರ್ತರು ಹಾಕಿದ್ದ ಪೋಸ್ಟರ್‌ ಹರಿದ ಪಾಕ್‌ ಕ್ರಿಕೆಟ್‌ ಅಭಿಮಾನಿಗಳು

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 2:52 IST
Last Updated 24 ಜೂನ್ 2019, 2:52 IST
ಕ್ರೀಡಾಂಗಣದ ಹೊರಗೆ ಬಲೂಚ್‌ ಕಾರ್ಯಕರ್ತರು ಹಾಕಿದ್ದ ಪೋಸ್ಟರ್‌ ಪಾಕಿಸ್ತಾನ ಕ್ರಿಕೆಟ್‌ ಅಭಿಮಾನಿಗಳು ಹರಿದು ಹಾಕಿದ್ದಾರೆ. ಚಿತ್ರ: ಎಎನ್‌ಐ ಟ್ವೀಟ್‌
ಕ್ರೀಡಾಂಗಣದ ಹೊರಗೆ ಬಲೂಚ್‌ ಕಾರ್ಯಕರ್ತರು ಹಾಕಿದ್ದ ಪೋಸ್ಟರ್‌ ಪಾಕಿಸ್ತಾನ ಕ್ರಿಕೆಟ್‌ ಅಭಿಮಾನಿಗಳು ಹರಿದು ಹಾಕಿದ್ದಾರೆ. ಚಿತ್ರ: ಎಎನ್‌ಐ ಟ್ವೀಟ್‌   

ಲಾರ್ಡ್ಸ್‌, ಲಂಡನ್:ವಿಶ್ವಕಪ್‌ ಕ್ರಿಕೆಟ್‌ ಪಂದ್ಯ ನಡೆಯುತ್ತಿರುವ ಲಾರ್ಡ್ಸ್‌ ಕ್ರೀಡಾಂಗಣದ ಹೊರಗೆ ಬಲೂಚ್‌ ಕಾರ್ಯಕರ್ತರು ಹಾಕಿದ್ದ ಪೋಸ್ಟರ್‌ಗಳನ್ನು ಪಾಕಿಸ್ತಾನ ಕ್ರಿಕೆಟ್‌ ಅಭಿಮಾನಿಗಳು ಹರಿದು ಹಾಕಿದ್ದಾರೆ.

ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಹ್ಯಾರಿಸ್ ಸೊಹೈಲ್ ಮತ್ತು ಬಾಬರ್ ಅಜಂ ಅವರ ಅರ್ಧಶತಕಗಳ ಬಲದಿಂದ ಪಾಕಿಸ್ತಾನ ತಂಡವುದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಜಯಭೇರಿ ಬಾರಿಸಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡವು ಬ್ಯಾಟಿಂಗ್ ಮಾಡಿತು. 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 308 ರನ್‌ ಗಳಿಸಿತು. ಅದಕ್ಕುತ್ತರವಾಗಿದಕ್ಷಿಣ ಆಫ್ರಿಕಾ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 259 ರನ್ ಗಳಿಸಿತು. ಪಾಕ್ 49 ರನ್‌ಗಳಿಂದ ಗೆದ್ದಿತು. ಹೋದ ಪಂದ್ಯದಲ್ಲಿ ಪಾಕ್ ಬಳಗವು ಭಾರತದ ಎದುರು ಸೋತಿತ್ತು.

ADVERTISEMENT

ಈಚೆಗೆ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಭಾರತ ತಂಡ ಜಯಗಳಿಸಿತ್ತು. ಈ ವೇಳೆ ಬಲೂಚ್ ಮಾನವ ಹಕ್ಕುಗಳ ಕಾರ್ಯಕರ್ತರು ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದರು. ಪಾಕ್‌ ವಿರುದ್ಧದ ಭಾರತದ ಜಯವನ್ನು ಸಂಭ್ರಮಿಸಿದ್ದರು.

ಕ್ರೀಡಾಂಗಣದ ಹೊರಗೆ ಹಾಕಿದ್ದ ಪೋಸ್ಟರ್‌ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.