ಸಿದ್ರಾ ಅಮಿನ್
ಕೊಲಂಬೊ: ಭಾರತ ವಿರುದ್ಧ ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ನೀತಿಸಂಹಿತೆ ಉಲ್ಲಂಘಿಸಿದ ಕಾರಣ ಪಾಕಿಸ್ತಾನ ತಂಡದ ಬ್ಯಾಟರ್ ಸಿದ್ರಾ ಅಮಿನ್ ಅವರಿಗೆ ವಾಗ್ದಂಡನೆ ವಿಧಿಸಲಾಗಿದೆ. ಅವರ ಶಿಸ್ತಿನ ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಸಹ ಸೇರ್ಪಡೆ ಮಾಡಲಾಗಿದೆ.
ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಈ ಪಂದ್ಯದಲ್ಲಿ ಸಿದ್ರಾ ಏಕಾಂಗಿಯಾಗಿ ಹೋರಾಡಿ 81 ರನ್ ಗಳಿಸಿದ್ದರು. ಆದರೆ ಪಂದ್ಯವನ್ನು ಪಾಕಿಸ್ತಾನ 88 ರನ್‌ಗಳಿಂದ ಸೋತಿತ್ತು.
ಗುರಿ ಬೆನ್ನಟ್ಟುವ ವೇಳೆ, 40ನೇ ಓವರಿನಲ್ಲಿ ಸಿದ್ರಾ ಅವರು ಸ್ನೇಹ ರಾಣಾ ಬೌಲಿಂಗ್‌ನಲ್ಲಿ ಔಟ್ ಆಗಿದ್ದರು. ಆಗ ಅವರು ಹತಾಶೆಯಿಂದ ಬ್ಯಾಟನ್ನು ಪಿಚ್‌ಗೆ ಜೋರಾಗಿ ಹೊಡೆದಿದ್ದರು.
‘ವಾಗ್ದಂಡನೆ ಜೊತೆ ಅವರ ಶಿಸ್ತಿನ ದಾಖಲೆಗೆ ಡಿಮೆರಿಟ್ ಪಾಯಿಂಟ್ ಸಹ ಸೇರ್ಪಡೆಗೊಳಿಸಲಾಗಿದೆ. ಇದು ಅವರ ಮೊದಲ ತಪ್ಪು ಆಗಿದೆ’ ಎಂದು ಐಸಿಸಿ ತಿಳಿಸಿದೆ. ಮ್ಯಾಚ್ ರೆಫ್ರಿ ಶಾಂಡ್ರೆ ಫ್ರಿಟ್ಝ್ ಅವರು ನಿರ್ಧಾರವನ್ನು ಸಿದ್ರಾ ಒಪ್ಪಿಕೊಂಡಿದ್ದಾರೆ. ಹೀಗಾಗಿ ಪ್ರತ್ಯೇಕ ವಿಚಾರಣೆ ಅಗತ್ಯವಿಲ್ಲ’ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.