ADVERTISEMENT

ಭವಿಷ್ಯದ ಬಗ್ಗೆ ಚಿಂತಿಸುವೆ: ರಣಜಿ ಚಾಂಪಿಯನ್ ವಿದರ್ಭ ಕೋಚ್ ಚಂದ್ರಕಾಂತ್‌

ಪಿಟಿಐ
Published 5 ಏಪ್ರಿಲ್ 2019, 19:58 IST
Last Updated 5 ಏಪ್ರಿಲ್ 2019, 19:58 IST
2018ರಲ್ಲಿ ರಣಜಿ ಟ್ರೋಫಿ ಗೆಲುವಿನ ಬಳಿಕ ತರಬೇತುದಾರ ಚಂದ್ರಕಾಂತ್‌ ಪಂಡಿತ್‌ ಅವರನ್ನು ಹೆಗಲಮೇಲೆ ಹೊತ್ತು ಸಂಭ್ರಮಿಸಿದ್ದ ವಿದರ್ಭ ಆಟಗಾರರು
2018ರಲ್ಲಿ ರಣಜಿ ಟ್ರೋಫಿ ಗೆಲುವಿನ ಬಳಿಕ ತರಬೇತುದಾರ ಚಂದ್ರಕಾಂತ್‌ ಪಂಡಿತ್‌ ಅವರನ್ನು ಹೆಗಲಮೇಲೆ ಹೊತ್ತು ಸಂಭ್ರಮಿಸಿದ್ದ ವಿದರ್ಭ ಆಟಗಾರರು   

ನವದೆಹಲಿ: ಭವಿಷ್ಯದ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದ್ದೇನೆ ಎಂದು ವಿದರ್ಭ ತಂಡದತರಬೇತುದಾರ ಚಂದ್ರಕಾಂತ್‌ ಪಂಡಿತ್‌ ಅವರು ತಿಳಿಸಿದ್ದಾರೆ.‌

ಭಾರತ ತಂಡದ ಮಾಜಿ ವಿಕೆಟ್‌ ಕೀಪರ್‌ ಆದ ಚಂದ್ರಕಾಂತ್‌ ಅವರು ತರಬೇತುದಾರರಾದ ಬಳಿಕ ವಿದರ್ಭ ತಂಡ ಎರಡು ಬಾರಿ ರಣಜಿ ಟ್ರೋಫಿ, ನಿರಂತರ ಎರಡು ಸಲ ಇರಾನಿ ಟ್ರೋಫಿ ಗೆದ್ದುಕೊಂಡಿತ್ತು. ಇದಾದ ಬಳಿಕ ಇತರೆ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಂದ ಪಾಟೀಲ್ ಅವರಿಗೆ ಕೋಚ್‌ ಆಗುವಂತೆ ಆಹ್ವಾನ ಬಂದಿತ್ತು.

ವಿದರ್ಭ ಕ್ರಿಕೆಟ್‌ ಸಂಸ್ಥೆಯ ಅಧಿಕಾರಿಗಳ ಜೊತೆಗೆ ಮಾತನಾಡಲು ನಾಗಪುರಕ್ಕೆ ಬಂದಿದ್ದೇನೆ. ಇನ್ನೆರಡು ದಿನಗಳಲ್ಲಿ ಭವಿಷ್ಯದ ಬಗ್ಗೆ ನಿರ್ಧರಿಸಲಿದ್ದು, ಈ ಬಗ್ಗೆ ಶೀಘ್ರವೇ ಅಂತಿಮ ನಿರ್ಧಾರ ಪ‍್ರಕಟಿಸುವೆ ಎಂದರು.

ADVERTISEMENT

ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಬೇಕು ಎಂದು ನಿರ್ಧರಿಸಿರುವುದು ಸತ್ಯ. ಇದುವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.ಕೆಲವು ರಾಜ್ಯ ಸಂಸ್ಥೆಗಳು ನನ್ನ ಸೇವೆ ಬಳಸಿಕೊಳ್ಳಲು ಆಸಕ್ತಿ ತೋರಿವೆ, ಆದರೆ ನಾನು ಈ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ತಿಳಿಸಿದರು.

1986ರಿಂದ 1992ರ ತನಕ ಪಂಡಿತ್‌ ಅವರು ಭಾರತದ ಪರ ಐದು ಟೆಸ್ಟ್‌ ಹಾಗೂ 36 ಏಕದಿನ ಪಂದ್ಯಗಳನ್ನು ಆಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.