ADVERTISEMENT

ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆಯಲ್ಲಿ ವಿನೋದ್ ಕಾಂಬ್ಳಿ ನೃತ್ಯ!

ಪಿಟಿಐ
Published 31 ಡಿಸೆಂಬರ್ 2024, 0:10 IST
Last Updated 31 ಡಿಸೆಂಬರ್ 2024, 0:10 IST
ಠಾಣೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ರಿಕೆಟಿಗ ವಿನೋದ್ ಕಾಂಬ್ಳಿ –ಫೇಸ್‌ಬುಕ್ ಚಿತ್ರ
ಠಾಣೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ರಿಕೆಟಿಗ ವಿನೋದ್ ಕಾಂಬ್ಳಿ –ಫೇಸ್‌ಬುಕ್ ಚಿತ್ರ   

ಠಾಣೆ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಅವರು ಇಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಇದೀಗ ಅವರು ಅದೇ ಆಸ್ಪತ್ರೆಯಲ್ಲಿ ಲವಲವಿಕೆಯಿಂದ ನೃತ್ಯ ಮಾಡುತ್ತಿರುವ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. 

ಕಾಂಬ್ಳಿ ಅವರನ್ನು ಮೊದಲಿಗೆ ಮೂತ್ರನಾಳದ ಸೋಂಕು ಮತ್ತು ಸ್ನಾಯುಸೆಳೆತದ ಚಿಕಿತ್ಸೆಗಾಗಿ ಡಿಸೆಂಬರ್ 21ರಂದು ಭಿವಂಡಿಯ ಆಕೃತಿ ಆಸ್ಪತ್ರೆಯಲ್ಲಿ ಸೇರಿಸಲಾಗಿತ್ತು. ಎಲ್ಲ ವೈದ್ಯಕೀಯ ತಪಾಸಣೆಗಳನ್ನು ನಡೆಸಿದ ನಂತರ ಅವರ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಕಂಡುಬಂದಿತ್ತು. 

ಇದೀಗ ಅವರು ಜನಪ್ರಿಯ ಗೀತೆಯೊಂದಕ್ಕೆ ನರ್ತಿಸುವ ವಿಡಿಯೊ ಜನರ ಗಮನ ಸೆಳೆಯುತ್ತಿದೆ. ಅವರ ಲವಲವಿಕೆಯಿಂದ ಹುರುಪುಗೊಂಡ ಆಸ್ಪತ್ರೆಯ  ಸಿಬ್ಬಂದಿ ಹಾಗೂ ಇತರ ರೋಗಿಗಳೂ ಹೆಜ್ಜೆ ಹಾಕಿದರು. ಒಬ್ಬ ನರ್ಸ್ ಮತ್ತು ಸಿಬ್ಬಂದಿ ಕೂಡ ಅವರೊಂದಿಗೆ ನರ್ತಿಸಿದ್ದಾರೆ. 

ADVERTISEMENT

‘ನಾನು ತಮ್ಮೆಲ್ಲರ ಪ್ರೀತಿ ವಿಶ್ವಾಸದಿಂದಾಗಿ ಇಷ್ಟು ದೂರ ಬಂದಿದ್ದೇನೆ’ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ಅವರು ಆಸ್ಪತ್ರೆಯ ನಿರ್ದೇಶಕ ಶೈಲೇಶ್ ಠಾಕೂರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. 

ಕಾಂಬ್ಳಿ ಅವರು ಚಿಕಿತ್ಸೆಗೆ ಸ್ಪಂದಿಸಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.