ADVERTISEMENT

ಕೊಹ್ಲಿಯನ್ನು ಕೆಣಕದಿರಲು ಐಪಿಎಲ್ ಕಾರಣವಲ್ಲ: ಪೇನ್

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 19:38 IST
Last Updated 9 ಏಪ್ರಿಲ್ 2020, 19:38 IST
ಟಿಮೆ ಪೇನ್
ಟಿಮೆ ಪೇನ್   

ಹೊಬರ್ಟ್: ವಿರಾಟ್ ಕೊಹ್ಲಿ ಮತ್ತು ಬಳಗವನ್ನು ಆಟದಂಗಳದಲ್ಲಿ ಕೆಣಕದಿರುವುದು ಐಪಿಎಲ್‌ನಲ್ಲಿ ಆಡುವ ಅವಕಾಶಕ್ಕಾಗಿ ಅಲ್ಲ ಎಂದು ಆಸ್ಟ್ರೇಲಿಯಾ ತಂಡದ ಆಟಗಾರ ಟಿಮ್ ಪೇನ್ ಹೇಳಿದ್ದಾರೆ.

‘ವಿರಾಟ್ ಅವರನ್ನು ಎದುರು ಹಾಕಿಕೊಂಡರೆ ಐಪಿಎಲ್ ಅವಕಾಶ ತಪ್ಪುವ ಭೀತಿಯಲ್ಲಿ ಆಸ್ಟ್ರೇಲಿಯನ್ನರು ಭಾರತ ತಂಡಕ್ಕೆ ಮೃಧು ಧೋರಣೆ ತೋರುತ್ತಾರೆ. ಸ್ಲೆಡ್ಜಿಂಗ್ ಮಾಡುವುದಿಲ್ಲ’ ಎಂದು ಈಚೆಗೆ ಮೈಕೆಲ್ ಕ್ಲಾರ್ಕ್ ಹೇಳಿದ್ದರು.

ಅದಕ್ಕೆ ಪ್ರತಿಕ್ರಿಯಿಸಿರುವ ಪೇನ್, ‘ಆಟದಂಗಳದಲ್ಲಿ ಕಟುಮಾತುಗಳನ್ನಾಡಿ ಕೊಹ್ಲಿಯನ್ನು ರೊಚ್ಚಿಗೇಳಿಸಿದರೆ, ಅವರ ಬ್ಯಾಟ್‌ ಮಾತನಾಡುತ್ತದೆ. ಆದ್ದರಿಂದ ಅವರನ್ನು ಕಟ್ಟಿಹಾಕುವ ತಂತ್ರದ ಭಾಗವಾಗಿ ನಾವು ಈ ರೀತಿ ವರ್ತಿಸುತ್ತೇವೆ’ ಎಂದು ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪೇನ್ ಹೇಳಿದ್ದಾರೆ.

ADVERTISEMENT

‘ಉತ್ತಮ ಬ್ಯಾಟ್ಸ್‌ಮನ್ ಆಗಿರುವ ಕೊಹ್ಲಿ ಆಕ್ರಮಣಕಾರಿಯೂ ಹೌದು. ಅವರನ್ನು ನಿಂದಿಸಿ ಪ್ರಚೋದಿಸಿದರೆ ಬೌಲರ್‌ಗಳನ್ನು ದಂಡಿಸುತ್ತಾರೆ. ಆದ್ದರಿಂದ ಅವರನ್ನು ಕಟ್ಟಿಹಾಕಲು ಬಹುತೇಕ ಎಲ್ಲ ತಂಡಗಳ ಆಟಗಾರರೂ ಇದೇ ರೀತಿ ಮಾಡುತ್ತಾರೆ. ಐಪಿಎಲ್‌ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.