ADVERTISEMENT

ಮಧುಶಂಕ ಪೊಲೀಸ್‌ ಕಸ್ಟಡಿ ಅವಧಿ ವಿಸ್ತರಣೆ

ಪಿಟಿಐ
Published 2 ಜೂನ್ 2020, 19:45 IST
Last Updated 2 ಜೂನ್ 2020, 19:45 IST
 ಶೆಹಾನ್‌ ಮಧುಶಂಕ -ಟ್ವಿಟರ್ ಚಿತ್ರ
ಶೆಹಾನ್‌ ಮಧುಶಂಕ -ಟ್ವಿಟರ್ ಚಿತ್ರ   

ಕೊಲಂಬೊ: ಮಾದಕ ವಸ್ತು ಹೊಂದಿದ್ದ ಆರೋಪದಲ್ಲಿ ಬಂಧಿತನಾಗಿರುವ ಶ್ರೀಲಂಕಾ ಕ್ರಿಕೆಟಿಗ ಶೆಹಾನ್‌ ಮಧುಶಂಕ ಅವರ ಪೊಲೀಸ್‌ ಕಸ್ಟಡಿ ಅವಧಿಯನ್ನು ವಿಸ್ತರಿಸಲಾಗಿದೆ. ಜೂನ್‌ 9ರವರೆಗೆ ಅವರು ಪೊಲೀಸ್‌ ವಿಚಾರಣೆ ಎದುರಿಸಲಿದ್ದಾರೆಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

25 ವರ್ಷದ ಮಧುಶಂಕ ಹಾಗೂ ಅವರ ಗೆಳೆಯನೊಬ್ಬನನ್ನು ಮೇ 23ರಂದು ಬಂಧಿಸಲಾಗಿತ್ತು. ಅವರ ಬಳಿ ಎರಡು ಗ್ರಾಮ್‌ನಷ್ಟು ಹೆರಾಯಿನ್‌ ಪತ್ತೆಯಾಗಿತ್ತು. ಜೂನ್‌ 2ರವರೆಗೆ ಅವರನ್ನು ಪೊಲೀಸ್‌ ಕಸ್ಟಡಿಯಲ್ಲಿರಿಸಲಾಗಿತ್ತು.

ಶ್ರೀಲಂಕಾ ಕ್ರಿಕೆಟ್‌ ಇತಿಹಾಸದಲ್ಲೇ ಮಾದಕವಸ್ತು ಪ್ರಕರಣದಲ್ಲಿ ಪೊಲೀಸ್‌ ವಿಚಾರಣೆ ಎದುರಿಸುತ್ತಿರುವ ಮಂಡಳಿಯ ಗುತ್ತಿಗೆ ಹೊಂದಿದ ಮೊದಲ ಆಟಗಾರ ಎಂಬ ಕುಖ್ಯಾತಿ ಮಧುಶಂಕ ಮೇಲಿದೆ.

ADVERTISEMENT

ಶ್ರೀಲಂಕಾ ಕ್ರಿಕೆಟ್‌ ಮಂಡಳಿಯು (ಎಸ್‌ಎಲ್‌ಸಿ) ಸದ್ಯ ಮಧುಶಂಕ ಅವರ ಗುತ್ತಿಗೆ ಒಪ್ಪಂದವನ್ನು ರದ್ದುಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.