
ಪಿಟಿಐ
ಪೂಜಾ ವಸ್ತ್ರಾಕರ್ ಪಿಟಿಐ ಚಿತ್ರ
ಮುಂಬೈ: ಭಾರತ ತಂಡದ ಮಧ್ಯಮ ವೇಗದ ಬೌಲರ್ ಆಗಿರುವ ಪೂಜಾ ವಸ್ತ್ರಾಕರ್ ಅವರು ಮೊಣಕಾಲ ಹಿಂಭಾಗದ ಸ್ನಾಯುರಜ್ಜು (ಹ್ಯಾಮ್‌ಸ್ಟ್ರಿಂಗ್) ನೋವಿನ ಕಾರಣ ಕನಿಷ್ಠ ಎರಡು ವಾರ ಡಬ್ಲ್ಯುಪಿಎಲ್‌ಗೆ ಅಲಭ್ಯರಾಗಿದ್ದಾರೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಕಟಿಸಿದೆ.
ಕಳೆದ ನವೆಂಬರ್‌ನಲ್ಲಿ ಡಬ್ಲ್ಯುಪಿಎಲ್ ಆಕ್ಷನ್ ವೇಳೆ, 26 ವರ್ಷ ವಯಸ್ಸಿನ ಪೂಜಾ ₹85 ಲಕ್ಷಕ್ಕೆ ಆರ್‌ಸಿಬಿ ಪಾಲಾಗಿದ್ದರು. 2024ರ ಟಿ20 ವಿಶ್ವಕಪ್ ನಂತರ ಅವರು ಯಾವುದೇ ಪ್ರಮುಖ ಪಂದ್ಯ ಆಡಿರಲಿಲ್ಲ. ಈ ಲೀಗ್ ಮೂಲಕ ಪುನರಾಗಮನಕ್ಕೆ ಸಜ್ಜಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.