ADVERTISEMENT

ವೇಗದ ದ್ವಿಶತಕ: ರಣಜಿ ಟ್ರೋಫಿಯಲ್ಲಿ ದಾಖಲೆ ಬರೆದ ಪೃಥ್ವಿ ಶಾ

ಪಿಟಿಐ
Published 27 ಅಕ್ಟೋಬರ್ 2025, 12:41 IST
Last Updated 27 ಅಕ್ಟೋಬರ್ 2025, 12:41 IST
<div class="paragraphs"><p>ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 3ನೇ ವೇಗದ ದ್ವಿಶತಕ</p></div>

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 3ನೇ ವೇಗದ ದ್ವಿಶತಕ

   

ಚಿತ್ರ ಕೃಪೆ: @CricCrazyJohns

ಚಂಡೀಗಡ: ಮುಂಬೈ ತಂಡದ ಆರಂಭಿಕ ಆಟಗಾರ ಪೃಥ್ವಿ ಶಾ ಅವರು ಸೋಮವಾರ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಚಂಡೀಗಢ ವಿರುದ್ಧ 141 ಎಸೆತಗಳಲ್ಲಿ ದ್ವಿಶತಕ ದಾಖಲಿಸಿದರು. ಭಾರತದ ಆಟಗಾರನೊಬ್ಬ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದಾಖಲಿಸಿದ ಮೂರನೇ ಅತಿವೇಗದ ದ್ವಿಶತಕ ಇದೆನಿಸಿತು.

ADVERTISEMENT

ಮೊದಲ ಇನಿಂಗ್ಸ್‌ನಲ್ಲಿ 104 ರನ್‌ಗಳ ಮುನ್ನಡೆ ಪಡೆದ ಮಹಾರಾಷ್ಟ್ರ ಎರಡನೇ ಇನಿಂಗ್ಸ್‌ನಲ್ಲಿ ಶಾ ಅವರ ಅಮೋಘ ಬ್ಯಾಟಿಂಗ್‌ ನೆರವಿನಿಂದ 52 ಓವರ್‌ಗಳಲ್ಲಿ 3 ವಿಕೆಟ್‌ಗೆ 359 ರನ್‌ ಗಳಿಸಿ ಡಿಕ್ಲೇರ್ಡ್‌ ಮಾಡಿಕೊಂಡಿದೆ. ಎದುರಾಳಿ ತಂಡಕ್ಕೆ 464 ರನ್‌ಗಳ ಕಠಿಣ ಗುರಿ ನೀಡಿದೆ. ಆತಿಥೇಯ ತಂಡವು ಮೂರನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್‌ಗೆ 129 ರನ್‌ ಗಳಿಸಿದೆ.

156 ಎಸೆತಗಳನ್ನು ಎದುರಿಸಿದ ಶಾ 222 ರನ್‌ ಬಾರಿಸಿದರು. ಅವರ ಇನಿಂಗ್ಸ್‌ನಲ್ಲಿ 29 ಬೌಂಡರಿ ಮತ್ತು ಐದು ಸಿಕ್ಸರ್‌ಗಳಿದ್ದವು. ಅವರು ರವಿಶಾಸ್ತ್ರಿ (123 ಎಸೆತ: 1985ರಲ್ಲಿ ಬರೋಡಾ ವಿರುದ್ಧ) ಮತ್ತು ತನ್ಮಯ್ ಅಗರವಾಲ್‌ (119 ಎಸೆತ; 2024ರಲ್ಲಿ ಅರುಣಾಚಲ ಪ್ರದೇಶ ವಿರುದ್ಧ) ನಂತರ ಅತಿವೇಗದ ದ್ವಿಶತಕ ದಾಖಲಿಸಿದರು. 

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌: ಮಹಾರಾಷ್ಟ್ರ: 58.5 ಓವರ್‌ಗಳಲ್ಲಿ 313. ಚಂಡೀಗಢ: 73 ಓವರ್‌ಗಳಲ್ಲಿ 209. ಎರಡನೇ ಇನಿಂಗ್ಸ್‌: ಮಹಾರಾಷ್ಟ್ರ: 52 ಓವರ್‌ಗಳಲ್ಲಿ 3 ವಿಕೆಟ್‌ಗೆ 359 (ಪೃಥ್ವಿ ಶಾ 222, ಸಿದ್ಧೇಶ್ ವೀರ್ 62) ಚಂಡೀಗಢ: 34 ಓವರ್‌ಗಳಲ್ಲಿ 1 ವಿಕೆಟ್‌ಗೆ 129 (ಅರ್ಜುನ್‌ ಆಜಾದ್‌ ಔಟಾಗದೇ 63, ಮನನ್ ವೋಹ್ರಾ ಔಟಾಗದೇ 53)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.