ADVERTISEMENT

IPL 2025: ಸ್ವದೇಶಕ್ಕೆ ಮರಳಿದ ರಬಾಡ

ಪಿಟಿಐ
Published 3 ಏಪ್ರಿಲ್ 2025, 13:47 IST
Last Updated 3 ಏಪ್ರಿಲ್ 2025, 13:47 IST
ಕಗಿಸೊ ರಬಾಡ
ಕಗಿಸೊ ರಬಾಡ   

ನವದೆಹಲಿ: ಗುಜರಾತ್ ಟೈಟನ್ಸ್ ತಂಡದ ವೇಗದ ಬೌಲರ್ ಕಗಿಸೊ ರಬಾಡ ತಮ್ಮ ತವರು ದಕ್ಷಿಣ ಆಫ್ರಿಕಾಕ್ಕೆ ಮರಳಿದರು. ವೈಯಕ್ತಿಕ ಕಾರಣಗಳಿಂದಾಗಿ ಅವರು ಸ್ವದೇಶಕ್ಕೆ ತೆರಳಿದ್ದಾರೆ. 

ರಬಾಡ ಅವರು ಟೂರ್ನಿಯಲ್ಲಿ ಎಷ್ಟು ಪಂದ್ಯಗಳಿಗೆ ಗೈರುಹಾಜರಾಗುವರು ಎಂಬುದನ್ನು ಗುಜರಾತ್ ಟೈಟನ್ಸ್ ತಂಡವು ತಿಳಿಸಿಲ್ಲ. ಇಲ್ಲಿಯವರೆಗೆ ಅವರು ಎರಡು ಪಂದ್ಯಗಳಲ್ಲಿ ಆಡಿದ್ದರು. 

‘ತಮ್ಮ ವೈಯಕ್ತಿಕವಾದ ಮತ್ತು ಮಹತ್ವದ ವಿಷಯವೊಂದರ ಬಗ್ಗೆ ರಬಾಡ ಅವರು ಸ್ವದೇಶಕ್ಕೆ ತೆರಳಿದ್ದಾರೆ’ ಎಂದು ಗುಜರಾತ್ ತಂಡವು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ರಬಾಡ ಬದಲಿಗೆ ದಕ್ಷಿಣ ಆಫ್ರಿಕಾದವರೇ ಆದ ಗೆರಾಲ್ಡ್‌ ಕೋಝಿ ಅಥವಾ ಅಫ್ಗಾನಿಸ್ತಾನದ ಆಲ್‌ರೌಂಡರ್ ಕರೀಮ್ ಜನತ್ ಅವರು ಆಡುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.