ADVERTISEMENT

ಕೊರೊನಾ ವಿರುದ್ಧ ಸಮರ: ₹ 52 ಲಕ್ಷ ದೇಣಿಗೆ ನೀಡಿದ ಸುರೇಶ್‌ ರೈನಾ

ಪಿಟಿಐ
Published 28 ಮಾರ್ಚ್ 2020, 15:27 IST
Last Updated 28 ಮಾರ್ಚ್ 2020, 15:27 IST
ಸುರೇಶ್‌ ರೈನಾ (ಎಡ) 
ಸುರೇಶ್‌ ರೈನಾ (ಎಡ)    

ನವದೆಹಲಿ: ಕೊರೊನಾ ಪಿಡುಗಿನ ವಿರುದ್ಧ ಸಮರ ಸಾರಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜೊತೆ ಹಿರಿಯ ಕ್ರಿಕೆಟಿಗ ಸುರೇಶ್‌ ರೈನಾ ಕೈಜೋಡಿಸಿದ್ದಾರೆ.

ಕೋವಿಡ್‌ ಪೀಡಿತರ ಸಂಕಷ್ಟಕ್ಕೆ ಮಿಡಿದಿರುವ ರೈನಾ, ₹52 ಲಕ್ಷ ದೇಣಿಗೆ ನೀಡಿದ್ದಾರೆ. ಅತೀ ಹೆಚ್ಚು ಮೊತ್ತ ಕೊಟ್ಟ ಭಾರತದ ಕ್ರೀಡಾಪಟು ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.

‘ಕೋವಿಡ್‌ ವಿರುದ್ಧ ಹೋರಾಡುತ್ತಿರುವವರಿಗೆ ನೆರವಾಗುವುದು ನಮ್ಮೆಲ್ಲರ ಕರ್ತವ್ಯ. ಹೀಗಾಗಿ ಪ್ರಧಾನ ಮಂತ್ರಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿಗಳ ಪರಿಹಾರ ನಿಧಿಗಳಿಗೆ ಕ್ರಮವಾಗಿ ₹31 ಹಾಗೂ ₹21 ಲಕ್ಷ ದೇಣಿಗೆ ನೀಡಿದ್ದೇನೆ. ನೀವು ಕೂಡ ಕೈಲಾದಷ್ಟು ಸಹಾಯ ಮಾಡಿ. ಜೈ ಹಿಂದ್‌’ ಎಂದು ರೈನಾ ಶನಿವಾರ ಟ್ವೀಟ್‌ ಮಾಡಿದ್ದಾರೆ.

ADVERTISEMENT

33 ವರ್ಷ ವಯಸ್ಸಿನ ಎಡಗೈ ಬ್ಯಾಟ್ಸ್‌ಮನ್‌ ರೈನಾ, 2005ರಿಂದ 2018ರ ಅವಧಿಯಲ್ಲಿ 18 ಟೆಸ್ಟ್‌, 226 ಏಕದಿನ ಹಾಗೂ 78 ಟ್ವೆಂಟಿ–20 ಪಂದ್ಯಗಳನ್ನು ಆಡಿದ್ದಾರೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಪ್ರತಿನಿಧಿಸುತ್ತಾರೆ.

ಹಿರಿಯ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌, ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಲಕ್ಷ್ಮಿ ರತನ್‌ ಶುಕ್ಲಾ, ಒಲಿಂಪಿಯನ್‌ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು, ಅಥ್ಲೀಟ್‌ ಹಿಮಾ ದಾಸ್‌ ಹಾಗೂ ಕುಸ್ತಿಪಟು ಬಜರಂಗ್‌ ಪುನಿಯಾ ಅವರೂ ಕೊರೊನಾ ಸಂತ್ರಸ್ಥರಿಗೆ ನೆರವಿನ ಹಸ್ತ ಚಾಚುವ ಮೂಲಕ ಮಾನವೀಯತೆ ಮರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.