ADVERTISEMENT

ರಾಜಸ್ಥಾನ ರಾಯಲ್ಸ್ ಕೋಚ್ ದಿಶಾಂತ್‌ಗೆ ಕೋವಿಡ್ ದೃಢ

ಪಿಟಿಐ
Published 12 ಆಗಸ್ಟ್ 2020, 8:27 IST
Last Updated 12 ಆಗಸ್ಟ್ 2020, 8:27 IST
ರಾಜಸ್ಥಾನ ರಾಯಲ್ಸ್
ರಾಜಸ್ಥಾನ ರಾಯಲ್ಸ್   

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುವ ರಾಜಸ್ಥಾನ ರಾಯಲ್ಸ್‌ ತಂಡದ ಫೀಲ್ಡಿಂಗ್ ಕೋಚ್ ದಿಶಾಂತ್ ಯಾಗ್ನಿಕ್‌ ಅವರಿಗೆ ಕೋವಿಡ್ –19 ಸೋಂಕು ಇರುವುದು ದೃಢಪಟ್ಟಿದೆ.ರಾಜಸ್ಥಾನ್ ರಾಯಲ್ಸ್‌ ಫ್ರಾಂಚೈಸ್ ಬುಧವಾರ ಈ ವಿಷಯವನ್ನು ತಿಳಿಸಿದೆ. ಯುಎಇಯಲ್ಲಿ ಮುಂದಿನ ತಿಂಗಳು 19ರಿಂದ ನಡೆಯಲಿರುವ ಟೂರ್ನಿಗಾಗಿ ತಂಡ ಅಲ್ಲಿಗೆ ತೆರಳಲು ಕೆಲವೇ ದಿನಗಳು ಬಾಕಿ ಇವೆ.

‘ಮುಂದಿನ ವಾರ ಮುಂಬೈನಲ್ಲಿ ಸೇರಿ ಅಲ್ಲಿಂದ ಯುಎಇಗೆ ತೆರಳುವ ಯೋಜನೆ ಹಾಕಿಕೊಂಡಿದ್ದೇವೆ. ಅದಕ್ಕೂ ಮೊದಲು ಸುರಕ್ಷತೆಯ ದೃಷ್ಟಿಯಿಂದ ಪರೀಕ್ಷೆ ನಡೆಸಲಾಗಿತ್ತು. ಆಟಗಾರರು, ನೆರವು ಸಿಬ್ಬಂದಿ ಮತ್ತು ತಂಡದ ಆಡಳಿತವು ಯುಎಇಗೆ ತೆರಳುವ ಮುನ್ನ ಎರಡು ಬಾರಿ ಪರೀಕ್ಷೆಗೆ ಒಳಗಾಗಬೇಕು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ತಿಳಿಸಿದೆ. ಹೆಚ್ಚುವರಿಯಾಗಿ ಒಂದು ಪರೀಕ್ಷೆ ನಡೆಸಲು ಫ್ರಾಂಚೈಸ್ ನಿರ್ಧರಿಸಿದೆ‘ ಎಂದು ಪ್ರಕಟಣೆ ತಿಳಿಸಿದೆ.

‘ಕೋಚ್ ದಿಶಾಂತ್ಯಾಗ್ನಿಕ್ ಸದ್ಯ ಅವರ ತವರು ಪಟ್ಟಣ ಉದಯಪುರದಲ್ಲಿದ್ದು 14 ದಿನಗಳ ಕ್ವಾರಂಟೈನ್‌ಗಾಗಿ ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ನೀಡಲಾಗಿದೆ’ ಎಂದು ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.