
ಪಿಟಿಐ
ಅಗರ್ತಲಾ: ತ್ರಿಪುರ ರಣಜಿ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಜೇಶ್ ಬಾನಿಕ್ (40) ಅವರು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಆಡಿದ್ದ ಅವರು ತಂದೆ, ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ.
ಆಲ್‌ರೌಂಡ್ ಆಟಗಾರ ಬಾನಿಕ್ ಅವರು 2002–03ನೇ ಋತುವಿನಲ್ಲಿ ತ್ರಿಪುರ ರಣಜಿ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ನಿವೃತ್ತಿಯ ನಂತರ 16 ವರ್ಷದೊಳಗಿನವರ ರಾಜ್ಯ ತಂಡದ ಆಯ್ಕೆಗಾರನಾಗಿ ಕಾರ್ಯನಿರ್ವಹಿಸಿದ್ದರು. ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 42 ಪಂದ್ಯಗಳಿಂದ 1,469 ರನ್ ಗಳಿಸಿದ್ದು, 2 ವಿಕೆಟ್ ಪಡೆದಿದ್ದರು.
ತ್ರಿಪುರ ತಂಡದ ಆಟಗಾರರು ಪಶ್ಚಿಮ ಬಂಗಾಳ ವಿರುದ್ಧ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಬಾನಿಕ್ ಅವರಿಗೆ ಗೌರವ ಸಲ್ಲಿಸಲು ಕಪ್ಪುಪಟ್ಟಿ ಧರಿಸಿ ಆಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.