ADVERTISEMENT

ರಣಜಿ ಟ್ರೋಫಿ: ಒಂದೇ ದಿನ 23 ವಿಕೆಟ್ ಪತನ

ಪಿಟಿಐ
Published 22 ಜನವರಿ 2026, 16:20 IST
Last Updated 22 ಜನವರಿ 2026, 16:20 IST
ಐದು ವಿಕೆಟ್ ಗಳಿಸಿದ ಸಂಭ್ರಮದಲ್ಲಿ ಪಾರ್ಥ್ ಬೂತ್
ಐದು ವಿಕೆಟ್ ಗಳಿಸಿದ ಸಂಭ್ರಮದಲ್ಲಿ ಪಾರ್ಥ್ ಬೂತ್   

ರಾಜ್‌ಕೋಟ್: ಇಲ್ಲಿಯ ನಿರಂಜನ್ ಶಾ ಕ್ರೀಡಾಂಗಣದಲ್ಲಿ ಸೌರಾಷ್ಟ್ರ ಮತ್ತು ಪಂಜಾಬ್ ನಡುವಣ ರಣಜಿ ಪಂದ್ಯದ ಮೊದಲ ದಿನದಾಟದಲ್ಲಿ ಒಟ್ಟು 23 ವಿಕೆಟ್‌ಗಳು ಪತನವಾದವು. 

ಟಾಸ್ ಗೆದ್ದ ಸೌರಾಷ್ಟ್ರ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಜಯ ಗೋಹಿಲ್ (82 ರನ್) ಅರ್ಧಶತಕ ಗಳಿಸಿದರು. ಆದರೂ ತಂಡವು 47.1 ಓವರ್‌ಗಳಲ್ಲಿ 172 ರನ್‌ ಗಳಿಸಿತು. ಪಂಜಾಬ್ ತಂಡದ ಸ್ಪಿನ್ನರ್ ಹರಪ್ರೀತ್ ಬ್ರಾರ್ (38ಕ್ಕೆ6) ಮತ್ತು ಜಸಿಂದರ್ ಸಿಂಗ್‌ (71ಕ್ಕೆ2) ಅವರ ಬೌಲಿಂಗ್ ಮುಂದೆ ಸೌರಾಷ್ಟ್ರ ಕುಸಿಯಿತು. 

ಆದರೆ ಶುಭಮನ್ ಗಿಲ್ ನಾಯಕತ್ವದ ಪಂಜಾಬ್ ತಂಡವನ್ನು ಖೆಡ್ಡಾಕ್ಕೆ ಕೆಡವಿದ ಸೌರಾಷ್ಟ್ರ ಮೊದಲ ಇನಿಂಗ್ಸ್‌ನಲ್ಲಿ 33 ರನ್‌ಗಳ ಮೇಲುಗೈ ಪಡೆಯಿತು. ಪಂಜಾಬ್ ತಂಡವು 40.1 ಓವರ್‌ಗಳಲ್ಲಿ 139 ರನ್ ಮಾತ್ರ ಗಳಿಸಿತು.  ಸ್ಪಿನ್ನರ್ ಪಾರ್ಥ್ ಬೂತ್ (33ಕ್ಕೆ5) ಮಿಂಚಿದರು. ರವೀಂದ್ರ ಜಡೇಜ ಮತ್ತು ಧರ್ಮೇಂದ್ರಸಿಂಹ ಜಡೇಜ ತಲಾ ಎರಡು ವಿಕೆಟ್ ಗಳಿಸಿದರು. 

ADVERTISEMENT

ಎರಡನೇ ಇನಿಂಗ್ಸ್‌ನಲ್ಲಿ ಸೌರಾಷ್ಟ್ರ ತಂಡವು 24 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದೆ. ದಿನದಾಟದ ಅಂತ್ಯಕ್ಕೆಒಟ್ಟು 57 ರನ್‌ ಮುನ್ನಡೆ ಸಾಧಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.