
ಕೆ.ಎಲ್. ರಾಹುಲ್
(ಬಿಸಿಸಿಐ ಚಿತ್ರ)
ಮುಂಬೈ: ಕರ್ನಾಟಕ ಮತ್ತು ಮುಂಬೈ ನಡುವಣ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮೂರನೇ ದಿನದಾಟದ ಅಂತ್ಯಕ್ಕೆ 29 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 113 ರನ್ ಗಳಿಸಿದ್ದ ಕರ್ನಾಟಕ ತಂಡ ನಾಲ್ಕನೇ ದಿನದಾಟದ ಆರಂಭದಲ್ಲೇ 13 ರನ್ ಗಳಿಸಿದ್ದ ಕರುಣ್ ನಾಯರ್ ವಿಕೆಟ್ ಕಳೆದುಕೊಂಡಿತು.
ಮೂರನೇ ದಿನದಾಟದಲ್ಲಿ 60 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಕೆ.ಎಲ್ ರಾಹುಲ್ ಅವರು ನಾಲ್ಕನೇ ದಿನದಾಟದ ಮೊದಲ ಅವಧಿಯಲ್ಲೇ ಆಕರ್ಷಕ ಶತಕ ಸಿಡಿಸಿ ಮಿಂಚಿದರು. ಪಂದ್ಯ ಗೆಲ್ಲಿಸುವುದರತ್ತ ಗಮನಹರಿಸಿರುವ ಅವರು ರನ್ ಗಳಿಕೆಗೆ ಒತ್ತು ನೀಡಿದ್ದಾರೆ.
ಸ್ಮರಣ್ ರವಿಚಂದ್ರನ್ ಜೊತೆ ಅಮೋಘ ಜೊತೆಯಾಟ ಆಡುತ್ತಿರುವ ಅವರು ಶತಕದ ಬಳಿಕ ಉತ್ತಮ ಬ್ಯಾಟಿಂಗ್ ಮುಂದುವರೆಸಿದ್ದಾರೆ.
ಸದ್ಯ, ನಾಲ್ಕನೇ ದಿನದಾಟದ ಮೊದಲ ಸೆಷನ್‌ನಲ್ಲಿ ಶತಕ (ಅಜೇಯ 130) ಸಿಡಿಸಿ ಮುನ್ನಡೆಯುತ್ತಿದ್ದಾರೆ. ಇವರಿಗೆ ಉತ್ತಮ ಸಾಥ್ ನೀಡಿರುವ ಸ್ಮರಣ್ ರವಿಚಂದ್ರನ್ ಕೂಡ ಅರ್ಧಶತಕ (ಅಜೇಯ 64 ರನ್) ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಇನ್ನೂ ಕರ್ನಾಟಕ ತಂಡ ಊಟದ ವಿರಾಮದ ವೇಳೆಗೆ 265/3 ವಿಕೆಟ್ ಕಳೆದುಕೊಂಡು ಸುಭದ್ರ ಸ್ಥಿತಿಯಲ್ಲಿದ್ದು, ಗೆಲುವಿಗೆ 60 ರನ್‌ಗಳ ಗತ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.