ಸಾಂದರ್ಭಿಕ ಚಿತ್ರ
ಇಂದೋರ್: ಏಳು ವಿಕೆಟ್ ಕಬಳಿಸಿದ ಅಕೀಬ್ ನಬಿ ಅವರ ಬೌಲಿಂಗ್‌ನಿಂದಾಗಿ ಜಮ್ಮು ಕಾಶ್ಮೀರ ತಂಡವು ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌ನಲ್ಲಿ ಮಧ್ಯಪ್ರದೇಶ ಎದುರು ಮೊದಲ ಇನಿಂಗ್ಸ್‌ನಲ್ಲಿ 42 ರನ್ ಮುನ್ನಡೆ ಗಳಿಸಿತು.
ಕಾಶ್ಮೀರ ತಂಡವು ಮೊದಲ ಇನಿಂಗ್ಸ್‌ನಲ್ಲಿ 192 ರನ್ ಗಳಿಸಿತ್ತು. ಶನಿವಾರ ಎರಡನೇ ದಿನದಾಟದಲ್ಲಿ ಮಧ್ಯಪ್ರದೇಶ ತಂಡವನ್ನು 152 ರನ್‌ಗಳಿಗೆ ಕಟ್ಟಿಹಾಕಿತು. ಎರಡನೇ ಇನಿಂಗ್ಸ್ ಆರಂಭಿರುವ ತಂಡವು ದಿನದಾಟದ ಅಂತ್ಯಕ್ಕೆ 26 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 84 ರನ್ ಗಳಿಸಿತು. ಒಟ್ಟು 126 ರನ್ ಮುನ್ನಡೆ ಸಾಧಿಸಿತು.
ಸಂಕ್ಷಿಪ್ತ ಸ್ಕೋರು
– ಮೊದಲ ಇನಿಂಗ್ಸ್
ಜಮ್ಮು–ಕಾಶ್ಮೀರ: 67 ಓವರ್‌ಗಳಲ್ಲಿ 194
ಮಧ್ಯಪ್ರದೇಶ: 53.4 ಓವರ್‌ಗಳಲ್ಲಿ 152 (ಯಶ್ ದುಬೆ 58, ವೆಂಕಟೇಶ್ ಅಯ್ಯರ್ 22, ಅಕೀಬ್ ನಬಿ 40ಕ್ಕೆ7, ಸುನಿಲ್ ಕುಮಾರ್ 47ಕ್ಕೆ3)
– ಎರಡನೇ ಇನಿಂಗ್ಸ್
ಜಮ್ಮು–ಕಾಶ್ಮೀರ: 26 ಓವರ್‌ಗಳಲ್ಲಿ 5ಕ್ಕೆ84 (ಅಬ್ದುಲ್ ಸಮದ್ 32, ಶುಭಂ ಖಜುರಿಯಾ 13, ಪಾರಸ್ ಡೋಗ್ರಾ 17, ಕುಲದೀಪ್ ಸೇನ್ 25ಕ್ಕೆ2, ವೆಂಕಟೇಶ್ ಅಯ್ಯರ್ 10ಕ್ಕೆ2)
ಕಲ್ಯಾಣಿ
– ಮೊದಲ ಇನಿಂಗ್ಸ್
ಆಂಧ್ರ: 88.4 ಓವರ್‌ಗಳಲ್ಲಿ 295
ಬಂಗಾಳ: 63 ಓವರ್‌ಗಳಲ್ಲಿ 5ಕ್ಕೆ199 (ಸುದೀಪ್ ಕುಮಾರ್ ಘರಮಿ ಬ್ಯಾಟಿಂಗ್ 112, ಸೂರಜ್ ಜೈಸ್ವಾಲ್ 20, ಸುಮಂತ್ ಗುಪ್ತಾ ಬ್ಯಾಟಿಂಗ್ 22)
ಜಮ್ಶೆಡ್‌ಪುರ
– ಮೊದಲ ಇನಿಂಗ್ಸ್
ಜಾರ್ಖಂಡ್: 85 ಓವರ್‌ಗಳಲ್ಲಿ 235
ಉತ್ತರಾಖಂಡ: 87 ಓವರ್‌ಗಳಲ್ಲಿ 5ಕ್ಕೆ282 (ಅವನೀಶ್ ಸುಧಾ 64, ಕುನಾಲ್ ಚಾಂಡೆಲಾ 68, ಜೆ.ಸುಚಿತ್ ಬ್ಯಾಟಿಂಗ್ 60, ಸೌರಭ್ ರಾವತ್ 32, ಶಾಶ್ವತ್ ಡಂಗ್ವಾಲ್ ಬ್ಯಾಟಿಂಗ್ 14)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.