ADVERTISEMENT

ನ್ಯೂಜಿಲೆಂಡ್‌ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್‌; ಆಘಾತ ನೀಡಿದ ಹೆನ್ರಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2019, 3:16 IST
Last Updated 3 ಫೆಬ್ರುವರಿ 2019, 3:16 IST
   

ವೆಲ್ಲಿಂಗ್ಟನ್: ಇಲ್ಲಿ ಭಾನುವಾರ ನಡೆಯುತ್ತಿರುವ ಸರಣಿಯ ಐದನೇ ಮತ್ತು ಕೊನೆಯ ಪಂದ್ಯದಲ್ಲಿ ರೋಹಿತ್‌ ಶರ್ಮಾ ನೇತೃತ್ವದ ಭಾರತ ತಂಡವು ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿತು.ಮಹೇಂದ್ರ ಸಿಂಗ್‌ ದೋನಿ ಮರಳಿರುವ ವಿಶ್ವಾಸದಲ್ಲಿದ್ದ ತಂಡಕ್ಕೆ ಮ್ಯಾಟ್‌ ಹೆನ್ರಿ ಆರಂಭಿಕ ಆಘಾತ ನೀಡಿದರು.

ಆರಂಭಿಕ ಆಟಗಾರರಾಗಿ ಅಂಗಳಕ್ಕಿಳಿ ನಾಯಕ ರೋಹಿತ್‌ ಶರ್ಮಾ ಮತ್ತು ಶಿಖರ್‌ ಧವನ್‌, ಮ್ಯಾಟ್‌ ಹೆನ್ರಿ ನಡೆಸಿದ ಮಾರಕ ಬೌಲಿಂಗ್‌ನ್ನು ಹೆಚ್ಚು ಹೊತ್ತು ಎದುರಿಸಲಾಗದೆ ವಿಕೆಟ್‌ ಒಪ್ಪಿಸಿದರು. ಶಿಖರ್‌ ಧವನ್‌ ಒಂದು ಬೌಂಡರಿ ಸೇರಿ 6 ರನ್‌ಗಳಿಸಿದರೆ, ರೋಹಿತ್ ಶರ್ಮಾ ಕೇವಲ 2ರನ್‌ ಗಳಿಗೆ ವಿಕೆಟ್‌ ಕಳೆದುಕೊಂಡರು. 15.2 ಓವರ್‌ಗಳಲ್ಲಿ ಭಾರತ ಪ್ರಮುಖ 4 ವಿಕೆಟ್‌ ಕಳೆದುಕೊಂಡು 39 ರನ್‌ಗಳಿಸಿದೆ.

ಯುವ ಆಟಗಾರ ಶುಭಮನ್ ಗಿಲ್ ಸಹ ಒಂದು ಬೌಂಡರಿಯೊಂದಿಗೆ ಒಟ್ಟು 7 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಮಧ್ಯಮ ಕ್ರಮಾಂಕದಲ್ಲಿ ನಿರೀಕ್ಷೆ ಮೂಡಿಸಿದ್ದ ಮಹೇಂದ್ರ ಸಿಂಗ್‌ ದೋನಿ ಬೌಲ್ಟ್‌ ದಾಳಿಗೆ ಬಲಿಯಾದರು. ಆರು ಎಸೆತ ಎದುರಿಸಿದ ದೋನಿ ಕೇವಲ 1ರನ್‌ ಗಳಿಸಿ ನಿರ್ಗಮಿಸಿದರು. ಸದ್ಯ ಅಂಬಟಿರಾಯುಡು(2) ಮತ್ತು ವಿಜಯ್ ಶಂಕರ್(12) ಕ್ರೀಸ್‌ನಲ್ಲಿದ್ದಾರೆ.

ADVERTISEMENT

ದಿನೇಶ್‌ ಕಾರ್ತಿಕ್‌ ಸ್ಥಾನಕ್ಕೆ ದೋನಿ ಮರಳಿದ್ದು, ಖಲೀಲ್‌ ಅಹ್ಮದ್ ಮತ್ತು ಕುಲದೀಪ್‌ ಯಾದವ್‌ ಜಾಗದಲ್ಲಿಮೊಹಮ್ಮದ್‌ ಶಮಿ ಮತ್ತು ವಿಜಯ್‌ ಶಂಕರ್‌ ಆಡುತ್ತಿದ್ದಾರೆ.

ಕ್ಷಣಕ್ಷಣದ ಸ್ಕೋರ್‌ ವಿವರ:https://bit.ly/2TyOyMB

ನ್ಯೂಜಿಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದ್ದ ಭಾರತ ತಂಡವು ನಾಲ್ಕನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ದೋನಿ ಇಲ್ಲದೇ ಕಣಕ್ಕಿಳಿದಿತ್ತು. ಆದರೆ ಟ್ರೆಂಟ್‌ ಬೌಲ್ಟ್‌ ಎದುರು ಭಾರತದ ಬ್ಯಾಟಿಂಗ್ ದೂಳೀಪಟವಾಗಿತ್ತು. ಕೇವಲ 92 ರನ್‌ಗಳಿಗೆ ಆಲೌಟ್‌ ಆಗಿತ್ತು.

ಭಾರತ‍ದ ಪರ:

ರೋಹಿತ್ ಶರ್ಮಾ (ನಾಯಕ) 2ರನ್‌, ಶಿಖರ್ ಧವನ್ 6, ಮಹೇಂದ್ರಸಿಂಗ್ ಧೋನಿ (ವಿಕೆಟ್‌ ಕೀಪರ್) 1, ಶುಭಮನ್ ಗಿಲ್ 7, ಅಂಬಟಿ ರಾಯುಡು (2*) ವಿಜಯ್ ಶಂಕರ್(12*)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.