ADVERTISEMENT

ಇನ್ಸ್ಟಾಗ್ರಾಮ್‌ನಲ್ಲಿ ಆರ್‌ಸಿಬಿಗೆ 1.80 ಕೋಟಿ ಫಾಲೋವರ್ಸ್

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2025, 23:46 IST
Last Updated 2 ಏಪ್ರಿಲ್ 2025, 23:46 IST
<div class="paragraphs"><p>ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ  ನಡೆದ ‘ಆರ್‌ಸಿಬಿ ಅನ್‌ಬಾಕ್ಸ್’ ಕಾರ್ಯಕ್ರಮ </p></div>

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ‘ಆರ್‌ಸಿಬಿ ಅನ್‌ಬಾಕ್ಸ್’ ಕಾರ್ಯಕ್ರಮ

   

ಪ್ರಜಾವಾಣಿ ಚಿತ್ರ/ಕೃಷ್ಣ ಕುಮಾರ್ ಪಿ.ಎಸ್.

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು  ಇನ್ಸ್ಟಾಗ್ರಾಮ್‌ ಸಾಮಾಜಿಕ ಜಾಲತಾಣದಲ್ಲಿ  ಅತಿ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ಐಪಿಎಲ್ ಫ್ರ್ಯಾಂಚೈಸಿಯಾಗಿದೆ. ಇನ್ಸ್ಟಾಗ್ರಾಮ್‌ನಲ್ಲಿ ಆರ್‌ಸಿಬಿಯು 1.8 ಕೋಟಿ ಫಾಲೋವರ್ಸ್‌ಗಳನ್ನು ಹೊಂದಿದೆ.

ADVERTISEMENT

ಈ ಹಾದಿಯಲ್ಲಿ ಆರ್‌ಸಿಬಿಯು  ತಲಾ ಐದು ಬಾರಿಯ ಚಾಂಪಿಯನ್ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ (1.77 ಕೋಟಿ) ಮತ್ತು ಮುಂಬೈ ಇಂಡಿಯನ್ಸ್ (1.62 ಕೋಟಿ) ತಂಡಗಳನ್ನು ಹಿಂದಿಕ್ಕಿದೆ. ಕಳೆದ 17 ಆವೃತ್ತಿಗಳಲ್ಲಿ ಆರ್‌ಸಿಬಿ ತಂಡವು ಒಂದು ಬಾರಿಯೂ ಚಾಂಪಿಯನ್ ಆಗಿಲ್ಲ.

ಹೋದ ತಿಂಗಳ 23ರಂದು ಆರ್‌ಸಿಬಿ 1.70 ಕೋಟಿ ಫಾಲೋವರ್ಸ್‌ ಹೊಂದಿತ್ತು. 10 ದಿನಗಳ ಅವಧಿಯಲ್ಲಿ 1.80 ಕೋಟಿಗೆ ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.