ADVERTISEMENT

ಐಪಿಎಲ್‌ ಮಿನಿ ಹರಾಜು: ಕರ್ನಾಟಕದ ಮನೋಜ್ ಬಾಂಢಗೆ ಆರ್‌ಸಿಬಿಗೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2022, 8:47 IST
Last Updated 24 ಡಿಸೆಂಬರ್ 2022, 8:47 IST
ಮನೋಜ್ ಬಾಂಢಗೆ (ಚಿತ್ರಕೃಪೆ: @RCBTweets)
ಮನೋಜ್ ಬಾಂಢಗೆ (ಚಿತ್ರಕೃಪೆ: @RCBTweets)   

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂಗ್ಲೆಂಡ್‌ನ ರೀಸ್ ಟಾಪ್ಲಿ ಮತ್ತು ವಿಲ್ ಜ್ಯಾಕ್ಸ್‌ ಅವರನ್ನು ಖರೀದಿಸಿತು.

ಅಲ್ಲದೇ ಕರ್ನಾಟಕದ ಆಟಗಾರ ಮನೋಜ್ ಬಾಂಢಗೆ ಅವರನ್ನೂ ಸೇರ್ಪಡೆ ಮಾಡಿಕೊಂಡಿತು.

ವಿಲ್ ಜ್ಯಾಕ್ಸ್‌ ಅವರಿಗೆ ₹ 3.2 ಕೋಟಿ, ಟಾಪ್ಲಿಗೆ ₹ 1.2 ಕೋಟಿ ಮೌಲ್ಯ ನೀಡಿತು. ವಿಲ್ ಜ್ಯಾಕ್ಸ್‌ ಅವರ ಮೂಲಬೆಲೆ ₹ 1.5 ಕೋಟಿಯಾಗಿತ್ತು. ಟಾಪ್ಲಿ ಅವರಿಗೆ ₹ 75 ಲಕ್ಷ ಮೂಲಬೆಲೆ ನಿಗದಿ ಮಾಡಲಾಗಿತ್ತು.

ADVERTISEMENT

ರಾಜನ್ ಕುಮಾರ್ (₹ 70 ಲಕ್ಷ), ಅವಿನಾಶ್ ಸಿಂಗ್ (₹ 60 ಲಕ್ಷ), ಮನೋಜ್ ಬಾಂಢಗೆ (₹ 20 ಲಕ್ಷ ) ಮತ್ತು ಹಿಮಾಂಶು ಶರ್ಮಾ (₹ 20 ಲಕ್ಷ) ಅವರನ್ನು ಸೇರ್ಪಡೆ ಮಾಡಿಕೊಂಡಿತು.

ಹರಾಜು ಪ್ರಕ್ರಿಯೆಯ ಆರಂಭದಿಂದಲೂ ಆರ್‌ಸಿಬಿ ತಂಡವು ಬಹಳ ಎಚ್ಚರಿಕೆಯಿಂದ ಹಣ ಖರ್ಚು ಮಾಡಿತು. ದೊಡ್ಡಮಟ್ಟದ ಹೂಡಿಕೆಗೆ ಮುಂದಾಗಲಿಲ್ಲ.

ಕರ್ನಾಟಕದ ಮನೀಷ್ ಪಾಂಡೆ ಅಥವಾ ಮಯಂಕ್ ಅಗರವಾಲ್ ಅವರ ಖರೀದಿಯಲ್ಲಿಯೂ ಹೆಚ್ಚು ಹಣ ಹೂಡಲು ಮುಂದಾಗಲಿಲ್ಲ. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆರ್‌ಸಿಬಿ ಕುರಿತ ವ್ಯಂಗ್ಯ ಟ್ವೀಟ್‌ಗಳು ಮತ್ತು ಮಿಮ್‌ಗಳು ಹರಿದಾಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.