ADVERTISEMENT

ಬೆಂಗಳೂರಿನ ಸೋಲಿಗೆ ಪಂಜಾಬ್ ವಿರುದ್ಧ ಸೇಡು ತೀರಿಸಿದ ಕೊಹ್ಲಿ; ವ್ಯಾಪಕ ಚರ್ಚೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಏಪ್ರಿಲ್ 2025, 11:31 IST
Last Updated 21 ಏಪ್ರಿಲ್ 2025, 11:31 IST
<div class="paragraphs"><p>ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ</p></div>

ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ

   

(ಎಕ್ಸ್ ವಿಡಿಯೊ ಸ್ಕ್ರೀನ್‌ಶಾಟ್)

ಚಂಡೀಗಢ: ಪಂಬಾಜ್ ಕಿಂಗ್ಸ್ ವಿರುದ್ಧ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿತು.

ADVERTISEMENT

ಈ ಪಂದ್ಯದ ಗೆಲುವಿನ ಬಳಿಕ ಆರ್‌ಸಿಬಿಯ ತಾರೆ ವಿರಾಟ್ ಕೊಹ್ಲಿ ಅವರ ಸಂಭ್ರಮಾಚರಣೆಯು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಅವರತ್ತ ದಿಟ್ಟಿಸಿ ನೋಡಿದ ಕೊಹ್ಲಿ, ವಿಶಿಷ್ಟ ಸನ್ನೆಯ ಮೂಲಕ ಸಂಭ್ರಮಾಚರಣೆ ಮಾಡಿದರು. ಆ ಮೂಲಕ ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಎದುರಾದ ಸೋಲಿಗೆ ಸೇಡು ತೀರಿಸಿಕೊಂಡರು.

ಮತ್ತೊಂದೆಡೆ ವಿರಾಟ್ ವರ್ತನೆಯಿಂದ ಕೆರಳಿದ ಶ್ರೇಯಸ್ ಅಯ್ಯರ್, ಹಸ್ತಲಾಘವದ ಸಂದರ್ಭದಲ್ಲಿ ಆಕ್ರೋಶಭರಿತರಾಗಿ ಕಂಡುಬಂದರು. ಇದರಿಂದಾಗಿ ಕೊಹ್ಲಿ ಹಾಗೂ ಶ್ರೇಯಸ್ ನಡುವೆ ಬಿಸಿ ಬಿಸಿ ವಾತಾವರಣಕ್ಕೆ ಕಾರಣವಾಯಿತು. ಶ್ರೇಯಸ್ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುವುದು ದೃಶ್ಯಗಳಲ್ಲಿ ಕಂಡುಬಂದಿದೆ.

ಬೆಂಗಳೂರಿನಲ್ಲಿ ನಡೆದ ಮಳೆ ಬಾಧಿತ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಪಂಜಾಬ್ ಐದು ವಿಕೆಟ್ ಅಂತರದ ಜಯ ಗಳಿಸಿತ್ತು. ಈ ಸಂದರ್ಭದಲ್ಲಿ ಗ್ಯಾಲರಿಯತ್ತ ಸನ್ನೆ ಮಾಡಿದ ಶ್ರೇಯಸ್, 'ಕಿರುಚಾಟ ಕೇಳಿಸುತ್ತಿಲ್ಲ' ಎಂಬ ರೀತಿಯಲ್ಲಿ ಹೀಯಾಳಿಸಿದ್ದರು.

ಇದೀಗ ಪಂಜಾಬ್‌ಗೆ ಕೊಹ್ಲಿ ತಕ್ಕ ಉತ್ತರ ನೀಡಿದ್ದಾರೆ. 'ಕರ್ಮ ಬಿಟ್ಟರೂ, ಕೊಹ್ಲಿ ಬಿಡಲ್ಲ' ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಭಾನುವಾರ ಚಂಡೀಗಢದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಒಡ್ಡಿದ 158 ರನ್‌ಗಳ ಗುರಿಯನ್ನು ವಿರಾಟ್ ಕೊಹ್ಲಿ (73*) ಹಾಗೂ ದೇವದತ್ತ ಪಡಕ್ಕಲ್ (61) ಅಮೋಘ ಅರ್ಧಶತಕಗಳ ಬಲದಿಂದ ಆರ್‌ಸಿಬಿ ತಂಡವು 18.5 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ವಿರಾಟ್ ಕೊಹ್ಲಿ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.