ADVERTISEMENT

RCB ಮಹಿಳಾ ತಂಡಕ್ಕೆ ಹೊಸ ಕೋಚ್: ತಮಿಳುನಾಡಿನ ಮಾಜಿ ಸ್ಪಿನ್ನರ್‌ ನೇಮಕ

ಪಿಟಿಐ
Published 6 ನವೆಂಬರ್ 2025, 6:09 IST
Last Updated 6 ನವೆಂಬರ್ 2025, 6:09 IST
<div class="paragraphs"><p>ಮಲೋಲನ್ ರಂಗರಾಜನ್</p></div>

ಮಲೋಲನ್ ರಂಗರಾಜನ್

   

ಚಿತ್ರ ಕೃಪೆ: @cricbuzz

ಬೆಂಗಳೂರು: ಮುಂಬರುವ WPL ನಾಲ್ಕನೇ ಆವೃತ್ತಿಗೆ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ತನ್ನ ಮಹಿಳಾ ತಂಡಕ್ಕೆ ನೂತನ ತರಬೇತುದಾರರನ್ನಾಗಿ ತಮಿಳುನಾಡಿನ ಮಾಜಿ ಸ್ಪಿನ್ನರ್ ಮಲೋಲನ್ ರಂಗರಾಜನ್ ಅವರನ್ನು ನೇಮಿಸಿದೆ.

ADVERTISEMENT

2024ರಲ್ಲಿ ಆರ್‌ಸಿಬಿ ಮಹಿಳಾ ತಂಡದ ಮುಖ್ಯ ತರಬೇತುದಾರರಾಗಿದ್ದ ಲ್ಯೂಕ್ ವಿಲಿಯಮ್ಸ್ ಅವರ ಜಾಗಕ್ಕೆ ರಂಗರಾಜನ್ ಅವರನ್ನು ನೇಮಿಸಲಾಗಿದೆ. ಲ್ಯೂಕ್ ವಿಲಿಯಮ್ಸ್, ಬಿಗ್ ಬ್ಯಾಷ್ ಲೀಗ್‌ನಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ತಂಡದ ಜೊತೆ ಒಪ್ಪಂದ ಮಾಡಿಕೊಂಡಿರುವುದರಿಂದ ಆರ್‌ಸಿಬಿ ಈ ನಿರ್ಧಾರ ತೆಗದುಕೊಂಡಿದೆ.

‘ಕಳೆದ 6 ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಆರ್‌ಸಿಬಿ ಸಹಾಯಕ ಸಿಬ್ಬಂದಿಯ ಪ್ರಮುಖ ಸದಸ್ಯರಾಗಿರುವ ಮಲೋಲನ್ ರಂಗರಾಜನ್ ಅವರನ್ನು ಮುಂಬರುವ ಡಬ್ಲ್ಯೂಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ಮಹಿಳಾ ತಂಡದ ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ’ ಎಂದು ಆರ್‌ಸಿಬಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದೆ.

ರಂಗರಾಜನ್ ಅವರು ಡಬ್ಲ್ಯೂಪಿಎಲ್ ಆರಂಭಿಕ ಆವೃತ್ತಿಯಿಂದಲೂ ಆರ್‌ಸಿಬಿ ತಂಡದ ಭಾಗವಾಗಿದ್ದರು. 2024 ರಲ್ಲಿ ಪ್ರಶಸ್ತಿ ಗೆದ್ದ ಋತುವಿನಲ್ಲಿ ಕೂಡ ಅವರು ತಂಡದ ಸಹಾಯಕ ತರಬೇತುದಾರರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.