ಮೆಲ್ಬರ್ನ್: ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ ಆ್ಯಂಡಿ ಪೈಕ್ರಾಫ್ಟ್ ಅವರು ಮ್ಯಾಚ್ ರೆಫರಿಯಾಗಿ 100 ಟೆಸ್ಟ್ ಪಂದ್ಯಗಳನ್ನು ಪೂರ್ಣಗೊಳಿಸಿದ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಗುರುವಾರ ಆರಂಭವಾದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್‌ನೊಂದಿಗೆ ಈ ಮೈಲುಗಲ್ಲು ತಲುಪಿದರು. ಪುರುಷರ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ನಾಲ್ಕನೇ ವ್ಯಕ್ತಿ 68 ವರ್ಷ ವಯಸ್ಸಿನ ಪೈಕ್ರಾಫ್ಟ್ ಆಗಿದ್ದಾರೆ.
ಶ್ರೀಲಂಕಾದ ಮಾಜಿ ಆಟಗಾರ ರಂಜನ್ ಮದುಗಲೆ 225 ಟೆಸ್ಟ್‌ಗಳೊಂದಿಗೆ ಅತ್ಯಂತ ಅನುಭವಿ ಮ್ಯಾಚ್ ರೆಫರಿಯಾಗಿದ್ದಾರೆ. ನ್ಯೂಜಿಲೆಂಡ್‌ನ ಜೆಫ್ ಕ್ರೋವ್ (125) ಮತ್ತು ಇಂಗ್ಲೆಂಡ್‌ನ ಕ್ರಿಸ್ ಬ್ರಾಡ್ (123) ನಂತರದ ಸ್ಥಾನದಲ್ಲಿದ್ದಾರೆ.
ಪೈಕ್ರಾಫ್ಟ್ ಅವರು 1983-1992ರ ಅವಧಿಯಲ್ಲಿ ಜಿಂಬಾಬ್ವೆ ಪರ ಮೂರು ಟೆಸ್ಟ್ ಮತ್ತು 20 ಏಕದಿನ ಪಂದ್ಯಗಳನ್ನು ಆಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.