ADVERTISEMENT

ವಿಂಡೀಸ್ ವಿರುದ್ಧದ ನಿರ್ಣಾಯಕ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ರಿಂಕು ಸಿಂಗ್

ಏಜೆನ್ಸೀಸ್
Published 28 ಫೆಬ್ರುವರಿ 2026, 6:07 IST
Last Updated 28 ಫೆಬ್ರುವರಿ 2026, 6:07 IST
<div class="paragraphs"><p>ರಿಂಕು ಸಿಂಗ್‌</p></div>

ರಿಂಕು ಸಿಂಗ್‌

   

ಕೃಪೆ: ಪಿಟಿಐ

ಕೋಲ್ಕತ್ತ: ಸ್ಫೋಟಕ ಶೈಲಿಯ ಬ್ಯಾಟರ್‌ ರಿಂಕು ಸಿಂಗ್‌ ಅವರು, ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯಕ್ಕೂ ಮುನ್ನ (ಶನಿವಾರ) ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ.

ADVERTISEMENT

ಯಕೃತ್ತಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರಿಂಕು ಅವರ ತಂದೆ ಖಾನ್‌ಚಂದ್‌ ಸಿಂಗ್ ಅವರು ಗ್ರೇಟರ್‌ ನೋಯಿಡಾದ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಿಗ್ಗೆ ನಿಧನರಾದರು.

ಖಾನ್‌ಚಂದ್‌ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದರಿಂದ ಮಂಗಳವಾರವೇ ಮನೆಗೆ ಮರಳಿದ್ದ ರಿಂಕು, ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ (ಗುರುವಾರ) ತಂಡ ಕೂಡಿಕೊಂಡಿದ್ದರು. ಮರುದಿನವೇ ಖಾನ್‌ಚಂದ್‌ ನಿಧನರಾದ ಕಾರಣ ಪುನಃ ತವರಿಗೆ ತೆರಳುವಂತಾಗಿತ್ತು.

ವೆಸ್ಟ್ ಇಂಡೀಸ್‌ ವಿರುದ್ಧದ ಪಂದ್ಯವು ಕೋಲ್ಕತ್ತದ ಈಡನ್‌ ಗಾರ್ಡನ್ಸ್‌ನಲ್ಲಿ ಮಾರ್ಚ್‌ 1ರಂದು ನಡೆಯಲಿದೆ. ಇತ್ತಂಡಗಳಿಗೆ ನಾಕೌಟ್‌ ಪ್ರವೇಶಿಸಲು ಇದು ನಿರ್ಣಾಯಕ ಪಂದ್ಯವಾಗಿದೆ. ಗೆದ್ದವರಿಗಷ್ಟೇ ಮುಂದಿನ ಹಂತಕ್ಕೆ ಟಿಕೆಟ್‌ ಸಿಗಲಿದೆ.

'ರಿಂಕು ಅವರು ನಾಳೆ ತಂಡಕ್ಕೆ ಮರಳಲಿದ್ದಾರೆ' ಎಂದು ಬಿಸಿಸಿಐ ದೇವಜಿತ್‌ ಸೈಕಿಯಾ ಶುಕ್ರವಾರ ಖಚಿತಪಡಿಸಿದ್ದಾರೆ.

ರಿಂಕು ಸಿಂಗ್‌ ಪಾಲಿಗಿದು ಮೊದಲ ವಿಶ್ವಕಪ್‌ ಟೂರ್ನಿಯಾಗಿದೆ. 2024ರಲ್ಲಿ ಅವರು ಮೀಸಲು ಆಟಗಾರರಾಗಿ ತಂಡದೊಂದಿಗೆ ಪ್ರಯಾಣಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.