ADVERTISEMENT

ಕ್ರಿಕೆಟ್: ದಕ್ಷಿಣ ಆಫ್ರಿಕಾದಲ್ಲಿ ಗೆದ್ದು ಇತಿಹಾಸ ಬರೆದ ಬಾಂಗ್ಲಾ

ಪಿಟಿಐ
Published 19 ಮಾರ್ಚ್ 2022, 21:48 IST
Last Updated 19 ಮಾರ್ಚ್ 2022, 21:48 IST
ಶಕೀಬ್ ಅಲ್ ಹಸನ್ –ಎಎಫ್‌ಪಿ ಚಿತ್ರ
ಶಕೀಬ್ ಅಲ್ ಹಸನ್ –ಎಎಫ್‌ಪಿ ಚಿತ್ರ   

ಸೆಂಚುರಿಯನ್: ಬಾಂಗ್ಲಾದೇಶ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಅದರ ನೆಲದಲ್ಲಿಯೇ ಮೊದಲ ಬಾರಿ ಏಕದಿನ ಕ್ರಿಕೆಟ್‌ನಲ್ಲಿ ಸೋಲಿಸಿ, ಇತಿಹಾಸ ರಚಿಸಿತು.

ಆತಿಥೇಯ ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಲಿಟನ್ ದಾಸ್, ಶಕೀಬ್ ಅಲ್ ಹಸನ್ ಮತ್ತು ಯಾಸೀರ್ ಅಲಿ ಅವರ ಅರ್ಧಶತಕಗಳ ಬಲದಿಂದ ಬಾಂಗ್ಲಾ ತಂಡವು 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 314 ರನ್‌ ಗಳಿಸಿತು. ಬಾಂಗ್ಲಾ ತಂಡವು ದಕ್ಷಿಣ ಆಫ್ರಿಕಾದಲ್ಲಿ ಪೇರಿಸಿದ ಗರಿಷ್ಠ ಮೊತ್ತ ಇದಾಗಿದೆ.

ಈ ಕಠಿಣ ಗುರಿಯನ್ನು ಬೆನ್ನತ್ತಿದ್ದ ಆತಿಥೇಯ ತಂಡಕ್ಕೆ ಬೌಲರ್‌ಗಳಾದ ಮೆಹದಿ ಹಸನ್ (61ಕ್ಕೆ4) ಮತ್ತು ತಸ್ಕಿನ್ ಅಹಮದ್ (36ಕ್ಕೆ3) ತಡೆಯೊಡ್ಡಿದರು. ದಕ್ಷಿಣ ಆಫ್ರಿಕಾ ತಂಡವು 48.5 ಓವರ್‌ಗಳಲ್ಲಿ 276 ರನ್ ಗಳಿಸಿ ಆಲೌಟ್ ಆಯಿತು. ರಸಿ ವ್ಯಾನ್ ಡರ್ ಡಸೆನ್ ಮತ್ತು ಡೇವಿಡ್ ಮಿಲ್ಲರ್ ಅವರ ಹೋರಾಟಕ್ಕೆ ತಕ್ಕ ಫಲ ಸಿಗಲಿಲ್ಲ.

ಸಂಕ್ಷಿಪ್ತ ಸ್ಕೋರು
ಬಾಂಗ್ಲಾದೇಶ:
50 ಓವರ್‌ಗಳಲ್ಲಿ 7ಕ್ಕೆ314 (ತಮೀಮ್ ಇಕ್ಬಾಲ್ 41, ಲಿಟನ್ ದಾಸ್ 50, ಶಕೀಬ್ ಅಲ್ ಹಸನ್ 77, ಯಾಸೀರ್ ಅಲಿ 50, ಮೆಹಮುದುಲ್ಲಾ 25, ಮಾರ್ಕೊ ಜೆನ್ಸೆನ್ 57ಕ್ಕೆ2, ಕೇಶವ್ ಮಹಾರಾಜ 56ಕ್ಕೆ2)
ದಕ್ಷಿಣ ಆಫ್ರಿಕಾ: 48.5 ಓವರ್‌ಗಳಲ್ಲಿ 276 (ಕೈಲ್ ವೆರೆಯನ್ 21, ತೆಂಬಾ ಬವುಮಾ 31, ರಸಿ ವ್ಯಾನ್ ಡರ್ ಡಸೆನ್ 86, ಡೇವಿಡ್ ಮಿಲ್ಲರ್ 79, ಕೇಶವ್ ಮಹಾರಾಜ 23, ಶರೀಫುಲ್ ಇಸ್ಲಾಂ 47ಕ್ಕೆ2, ತಸ್ಕಿನ್ ಅಹಮದ್ 36ಕ್ಕೆ3, ಮೆಹದಿ ಹಸನ್ 61ಕ್ಕೆ4)
ಫಲಿತಾಂಶ: ಬಾಂಗ್ಲಾದೇಶ 38 ರನ್‌ಗಳ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.