ADVERTISEMENT

ಕೊರೊನಾ ವಿರುದ್ಧ ಹೋರಾಟ ‘ಟೆಸ್ಟ್‌’ ಇದ್ದಂತೆ: ಸಚಿನ್ ತೆಂಡೂಲ್ಕರ್

ಏಜೆನ್ಸೀಸ್
Published 20 ಮಾರ್ಚ್ 2020, 4:18 IST
Last Updated 20 ಮಾರ್ಚ್ 2020, 4:18 IST
ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್   

ನವದೆಹಲಿ: ಕೊರೊನಾ ವೈರಸ್ ಎದುರಿನ ಹೋರಾಟವು ಟೆಸ್ಟ್ ಕ್ರಿಕೆಟ್ ಪಂದ್ಯವಿದ್ದಂತೆ ಎಂದು ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.

‘ಇಡೀ ವಿಶ್ವವೇ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿದೆ. ಟೆಸ್ಟ್‌ ಪಂದ್ಯದಲ್ಲಿ ರಕ್ಷಣಾತ್ಮಕವಾಗಿ ಆಡುತ್ತ, ತಂಡವು ಒಗ್ಗೂಡಿ ಹೋರಾಡುವ ಮಾದರಿಯಲ್ಲಿ ಈ ಕಾರ್ಯ ನಡೆಯಬೇಕಿದೆ. ಕ್ರಿಕೆಟ್‌ನ ಅತ್ಯಂತ ಹಳೆಯ ಮಾದರಿಯಾದ ಟೆಸ್ಟ್ ಕ್ರಿಕೆಟ್‌ನ ಪಾಠಗಳು ನಮಗೆ ನೆರವಾಗಲಿವೆ’ ಎಂದು ಸಚಿನ್ ಆಂಗ್ಲಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ಪಿಚ್ ಮರ್ಮ ತಿಳಿಯದೇ ಹೋದಾಗ, ಎದುರಾಳಿಯ ದಾಳಿಯು ಪ್ರಭಾವಶಾಲಿಯಾಗಿರುವಾಗ ರಕ್ಷಣಾತ್ಮಕ ಶೈಲಿಯೇ ಶ್ರೇಷ್ಠ ಆಕ್ರಮಣಕಾರಿ ಶೈಲಿಯೂ ಆಗುತ್ತದೆ. ಆದ್ದರಿಂದ ತಾಳ್ಮೆ, ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ಎದುರಿಸಬೇಕು’ ಎಂದು ಸಲಹೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.