ADVERTISEMENT

ಕ್ರಿಸ್‌ಮಸ್‌ ಸಂಭ್ರಮ: ಟ್ವಿಟರ್‌ನಲ್ಲಿ ಶುಭ ಕೋರಿದ 'ಕ್ರಿಕೆಟ್‌ ದೇವರು'

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 5:37 IST
Last Updated 25 ಡಿಸೆಂಬರ್ 2019, 5:37 IST
   

ಮುಂಬೈ: ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ಭಾರತದ ಹಿರಿಯ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಟ್ವಿಟರ್‌ನಲ್ಲಿಶುಭಕೋರಿದ್ದಾರೆ.

‘ಎಲ್ಲರಿಗೂ ಕ್ರಿಸ್‌ಮಸ್‌ ಹಬ್ಬದ ಶುಭಾಶಯಗಳು. ಈ ಕ್ರಿಸ್‌ಮಸ್‌ ನಮ್ಮ ಹೃದಯಗಳಿಗೆ ಮತ್ತು ಮನೆಯವರಿಗೆಸಾಕಷ್ಟು ಸಂತೋಷವನ್ನು ನೀಡಲಿ. ಜೊತೆಗೆ, ಕುಟುಂಬ ಮತ್ತು ಸ್ನೇಹಿತರೊಂದಿಗೆ ನೀವು ಅದ್ಭುತ ಸಮಯವನ್ನು ಕಳೆಯುತ್ತೀರಿ ಎಂದು ನಾನು ಭಾವಿಸುತ್ತೇನೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಸಚಿನ್‌ ಟ್ವೀಟ್‌ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ADVERTISEMENT

ಸಚಿನ್‌, ಕ್ರಿಕೆಟ್‌ ಜಗತ್ತಿನಲ್ಲಿ ತಮ್ಮದೇ ಆದ ಚಾಪು ಮುಡಿಸಿದ್ದಾರೆ. 200 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಅವರು ಒಟ್ಟು 15921 ರನ್‌ ಗಳಿಸಿದ್ದಾರೆ. ಇತ್ತ 463 ಏಕದಿನ ಕ್ರಿಕೆಟ್‌ ಪಂದ್ಯಗಳನ್ನು ಆಡಿದ್ದು ಒಟ್ಟು 18426 ರನ್‌ ಸಿಡಿಸಿದ್ದಾರೆ. ‌

‌‘ರಹಾನೆ ಸಂದೇಶ’
ಕ್ರಿಸ್‌ಮಸ್‌ ಅಂಗವಾಗಿ ಭಾರತೀಯ ಟೆಸ್ಟ್ ಕ್ರಿಕೆಟ್‌ ತಂಡದ ಉಪನಾಯಕ ಅಂಜಿಕ್ಯ ರಹಾನೆ ಕೂಡ ಟ್ವಿಟರ್‌ನಲ್ಲಿ ಶುಭ ಕೋರಿದ್ದಾರೆ.

ಕ್ರಿಸ್‌ಮಸ್‌ ಹಬ್ಬ ಎಲ್ಲರಿಗೂ ಶಾಂತಿ ಮತ್ತು ಸಮೃದ್ಧಿಯನ್ನು ನೀಡಲಿ ಎಂದು ಹಾರೈಸುತ್ತೇನೆ ಎಂದು ಟೀಂ ಇಂಡಿಯಾದ ಆಲ್‌ರೌಂಡರ್‌ ರವಿಂದ್ರ ಜಡೇಜ ಟ್ವೀಟ್‌ ಮಾಡಿದ್ದಾರೆ.

ತ್ವರಿತ ಸುದ್ದಿ, ನಿಖರ ಮಾಹಿತಿಗೆwww.prajavani.netನೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.