
ಪಿಟಿಐ
ನವದೆಹಲಿ: ಭಾರತ ಟೆಸ್ಟ್ ತಂಡದ ಯುವ ಬ್ಯಾಟರ್ ಸಾಯಿ ಸುದರ್ಶನ್ ಅವರು ಮಧ್ಯಪ್ರದೇಶ ವಿರುದ್ಧ ವಿಜಯ್ ಹಜಾರೆ ಟ್ರೋಫಿ ಪಂದ್ಯದ ವೇಳೆ ಪಕ್ಕೆಲುಬಿಗೆ ಗಾಯಗೊಂಡಿದ್ದಾರೆ. ಅವರು ಚೇತರಿಸಿಕೊಳ್ಳಲು ತಿಂಗಳಿಗೂ ಹೆಚ್ಚು ಸಮಯ ಹಿಡಿಯಬಹುದು ಎಂದು ಬಿಸಿಸಿಐ ಮೂಲವೊಂದು ಶುಕ್ರವಾರ ತಿಳಿಸಿದೆ.
ಅಹಮದಾಬಾದಿನಲ್ಲಿ ಡಿಸೆಂಬರ್ 26ರಂದು ಮಧ್ಯಪ್ರದೇಶ ವಿರುದ್ಧ ತಮಿಳುನಾಡು ತಂಡಕ್ಕೆ ಆಡುವಾಗ ಪಕ್ಕೆಲುಬಿನ ಬಲಭಾಗದ ಮೂಳೆಗೆ ಏಟು ಆಗಿದೆ. 24 ವರ್ಷ ವಯಸ್ಸಿನ ಆಟಗಾರ, ಸೀಮಿತ ಓವರುಗಳ ಮಾದರಿಯಲ್ಲಿ ಆಡುವ ಭಾರತ ತಂಡದ ಭಾಗವಾಗಿಲ್ಲ.
ತಮಿಳುನಾಡು ತಂಡ ಆಡಬೇಕಿರುವ ಉಳಿದ ರಣಜಿ ಟ್ರೋಫಿ ಪಂದ್ಯಗಳನ್ನು ಅವರು ಕಳೆದುಕೊಳ್ಳಲಿದ್ದಾರೆ. ಸುದರ್ಶನ್ ಅವರು 29ರಂದು ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ಸ್ಕ್ಯಾನ್‌ಗೆ ಒಳಗಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.