ADVERTISEMENT

ದ್ರಾವಿಡ್, ಧೋನಿ ದಾಖಲೆ ಮುರಿದ ಪಾಕ್ ಟಿ20 ತಂಡದ ನಾಯಕ ಸಲ್ಮಾನ್ ಆಘಾ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ನವೆಂಬರ್ 2025, 6:11 IST
Last Updated 26 ನವೆಂಬರ್ 2025, 6:11 IST
<div class="paragraphs"><p>ಸಲ್ಮಾನ್‌ ಅಲಿ ಆಘಾ –</p></div>

ಸಲ್ಮಾನ್‌ ಅಲಿ ಆಘಾ –

   

ಎಕ್ಸ್‌ ಚಿತ್ರ

ಪಾಕಿಸ್ತಾನ ಟಿ20 ಕ್ರಿಕೆಟ್ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಅವರು ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಅವರು, ರಾಹುಲ್ ದ್ರಾವಿಡ್, ಮಹೇಂದ್ರ ಸಿಂಗ್ ಧೋನಿ ಹಾಗೂ ಪಾಗೂ ಪಾಕಿಸ್ತಾನ ತಂಡದ ಮಾಜಿ ಆಟಗಾರ ಮೊಹಮ್ಮದ್ ಯೂಸೂಫ್ ಅವರ ದಾಖಲೆ ಅಳಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ADVERTISEMENT

ಕ್ಯಾಲೆಂಡರ್ ವರ್ಷವೊಂದರಲ್ಲಿ ಅತೀ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದ ದಾಖಲೆ ಹೊಂದಿದ್ದ ರಾಹುಲ್ ದ್ರಾವಿಡ್, ಎಂ.ಎಸ್. ಧೋನಿ ಹಾಗೂ ಮೊಹಮ್ಮದ್ ಯೂಸೂಫ್ ಅವರ ದಾಖಲೆ ಮುರಿದ್ದಾರೆ. ಆಘಾ ಅವರು ಭಾನುವಾರದಂದು ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯತ್ತಿದ್ದಂತೆ ಈ ದಾಖಲೆ ಮಾಡಿದ್ದಾರೆ. ಅವರು 2025ರಲ್ಲಿ ಪಾಕಿಸ್ತಾನದ ಪರ 54ನೇ ಅಂತರರಾಷ್ಟ್ರೀಯ ಪಂದ್ಯ ಆಡಿದರು.

ಇದಕ್ಕೂ ಮೊದಲ ಈ ದಾಖಲೆ 1999ರಲ್ಲಿ 53 ಪಂದ್ಯಗಳನ್ನು ಆಡಿದ್ದ ರಾಹುಲ್ ದ್ರಾವಿಡ್, 2000ದಲ್ಲಿ 53 ಪಂದ್ಯಗಳನ್ನು ಆಡಿದ್ದ ಪಾಕಿಸ್ತಾನದ ಮೊಹಮ್ಮದ್ ಯೂಸೂಫ್ ಹಾಗೂ 2007ರಲ್ಲಿ ಇಷ್ಟೇ ಪಂದ್ಯಗಳಲ್ಲಿ ಭಾರತದ ಪರ ಆಡಿದ್ದ ಮಾಜಿ ನಾಯಕ ಧೋನಿ ಅವರ ದಾಖಲೆ ಹಿಂದಿಕ್ಕಿದರು.

ಕ್ಯಾಲೆಂಡರ್ ವರ್ಷವೊಂದರಲ್ಲಿ ಅತೀ ಹೆಚ್ಚು ಪಂದ್ಯ ಆಡಿದ ಆಟಗಾರರು

ಸಲ್ಮಾನ್ ಅಲಿ ಆಘಾ–54 ಪಂದ್ಯಗಳು– 2025

ರಾಹುಲ್ ದ್ರಾವಿಡ್–53 ಪಂದ್ಯಗಳು – 1999

ಮೊಹಮ್ಮದ್ ಯೂಸೂಫ್–53 ಪಂದ್ಯಗಳು– 2000

ಎಂ.ಎಸ್. ಧೋನಿ–53 ಪಂದ್ಯಗಳು–2007

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.