ADVERTISEMENT

IPL 2025 | ಕೀಪಿಂಗ್‌: ಸಂಜುಗೆ ಎನ್‌ಸಿಎ ಅನುಮತಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2025, 16:02 IST
Last Updated 2 ಏಪ್ರಿಲ್ 2025, 16:02 IST
<div class="paragraphs"><p>ಸಂಜು ಸ್ಯಾಮ್ಸನ್</p><p></p></div>

ಸಂಜು ಸ್ಯಾಮ್ಸನ್

   

(ಪಿಟಿಐ ಚಿತ್ರ)

ADVERTISEMENT

ಬೆಂಗಳೂರು: ವಿಕೆಟ್‌ ಕೀಪಿಂಗ್ ಮಾಡಲು ಎನ್‌ಸಿಎನಿಂದ ಅನುಮತಿ ದೊರೆತಿರುವ ಕಾರಣ ಸಂಜು ಸ್ಯಾಮ್ಸನ್ ಅವರು ರಾಜಸ್ಥಾನ ರಾಯಲ್ಸ್ ತಂಡದ ಮುಂದಿನ ಐಪಿಎಲ್‌ ಪಂದ್ಯಗಳಲ್ಲಿ ನಾಯಕತ್ವ ವಹಿಸುವ ಹಾದಿ ಸುಗಮಗೊಂಡಿದೆ.

ಫೆಬ್ರುವರಿಯಲ್ಲಿ ಇಂಗ್ಲೆಂಡ್ ವಿರುದ್ ಟಿ20 ಸರಣಿಯಲ್ಲಿ ಜೋಫ್ರಾ ಆರ್ಚರ್ ಬೌಲಿಂಗ್‌ನಲ್ಲಿ ಬೌನ್ಸರ್ ಬೆರಳಿಗೆ ಬಡಿದ ಕಾರಣ ಅವರ ಬಲ ತೋರುಬೆರಳಿಗೆ ಏಟಾಗಿದ್ದು, ಅದಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಅವರಿಗೆ ಬ್ಯಾಟ್‌ ಮಾಡಲು ಅನುಮತಿ ನೀಡಿದ್ದ ಎನ್‌ಸಿಎ, ಕೀಪಿಂಗ್ ಮಾಡದಿರುವಂತೆ ಸಲಹೆ ನೀಡಿತ್ತು. ಹೀಗಾಗಿ ಅವರ ಬದಲು ರಿಯಾನ್ ಪರಾಗ್ ನಾಯಕತ್ವ ವಹಿಸಿದ್ದರು. ಸಂಜು ಇಂಪ್ಯಾಕ್ಟ್‌ ಪ್ಲೇಯರ್ ಆಗಿ ಬ್ಯಾಟಿಂಗ್ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.