
ಸರ್ಫರಾಜ್
ಜೈಪುರ (ಪಿಟಿಐ): ಅಮೋಘ ಲಯದಲ್ಲಿರುವ ಸರ್ಫರಾಜ್ ಖಾನ್ ವರ್ಷದ ಕೊನೆಯ ದಿನ 75 ಎಸೆತಗಳಲ್ಲಿ 14 ಸಿಕ್ಸರ್‌ಗಳು ಒಳಗೊಂಡಿದ್ದ 157 ರನ್ ಸಿಡಿಸಿದರು. ಅವರ ಅಬ್ಬರದ ಆಟದ ನೆರವಿನಿಂದ ಮುಂಬೈ ತಂಡ ‘ಸಿ’ ಗುಂಪಿನ ವಿಜಯ್ ಹಜಾರೆ ಟೂರ್ನಿ ಪಂದ್ಯದಲ್ಲಿ ಬುಧವಾರ ಗೋವಾ ತಂಡವನ್ನು 87 ರನ್‌ಗಳಿಂದ ಮಣಿಸಿ ನಾಕೌಟ್ ಅವಕಾಶ ಉಜ್ವಲಗೊಳಿಸಿತು.
ಸೈಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲೂ ರನ್ ಹೊಳೆ ಹರಿಸಿದ್ದ ಸರ್ಫರಾಜ್ 56 ಎಸೆತಗಳಲ್ಲಿ ಶತಕ ದಾಟಿದರು. ಮುಂಬೈ 8 ವಿಕೆಟ್‌ಗೆ 444 ರನ್ ಪೇರಿಸಿತು. ಸರ್ಫರಾಜ್ ಅವರ ತಮ್ಮ ಮುಶೀರ್ 60 ರನ್ ಗಳಿಸಿದರೆ, ಹಾರ್ದಿಕ್ ತಮೋರೆ 53 ರನ್, ಯಶಸ್ವಿ ಜೈಸ್ವಾಲ್ 46 ರನ್ ಬಾರಿಸಿದರು.
ಈ ಭಾರಿ ಸವಾಲಿನೆದುರು ಗೋವಾ ಸುಲಭವಾಗಿ ಶರಣಾಗಲಿಲ್ಲ. 9 ವಿಕೆಟ್‌ಗೆ 357 ರನ್ ಗಳಿಸಿ ಹೋರಾಟ ತೋರಿತು. ಅಭಿನವ್ ತೇಜರಾಣಾ ಬರೋಬ್ಬರಿ 100 ರನ್ (70ಎ, 4x5, 6x8) ಬಾರಿಸಿದರು. ನಾಯಕ ದೀಪರಾಜ್ ಗಾಂವಕರ್ ಬರೇ 28 ಎಸೆತಗಳಲ್ಲಿ 70 ರನ್ (4x4, 6x7) ಚಚ್ಚಿದರು. ಶಾರ್ದೂಲ್ ಠಾಕೂರ್ 20 ರನ್ ನೀಡಿ 3 ವಿಕೆಟ್ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.