ರಾಜ್ಕೋಟ್: ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿರುವ ಮುಂಬೈ ಬ್ಯಾಟ್ಸ್ಮನ್ ಸರ್ಫರಾಜ್ ಖಾನ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ನಿರಂತರ (ವಿಕೆಟ್ ಒಪ್ಪಿಸುವ ಮುನ್ನ) 605 ರನ್ ಗಳಿಸಿ ದಾಖಲೆ ಬರೆದಿದ್ದಾರೆ.
ಇಲ್ಲಿಸೌರಾಷ್ಟ್ರ ತಂಡದ ವಿರುದ್ಧ ನಡೆಯುತ್ತಿರುವ ರಣಜಿ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 78 ರನ್ ಗಳಿಸಿ ಔಟಾದ ಸರ್ಫರಾಜ್, ಹಿಂದಿನ ಎರಡು ಪಂದ್ಯಗಳಲ್ಲಿ ಔಟಾಗದೆ ಕ್ರಮವಾಗಿ 301ಮತ್ತು 226ಸಿಡಿಸಿದ್ದರು.
ಉತ್ತರ ಪ್ರದೇಶ ವಿರುದ್ಧ ತ್ರಿಶತಕ ಹಾಗೂಹಿಮಾಚಲ ಪ್ರದೇಶ ಎದುರು ದ್ವಿಶತಕ ಗಳಿಸಿದ್ದರು.
ವಿಕೆಟ್ ಒಪ್ಪಿಸುವ ಮುನ್ನ ಹೆಚ್ಚು ರನ್ ಗಳಿಸಿದ ದಾಖಲೆ ಇರುವುದು ಕೆ.ಸಿ ಇಬ್ರಾಹಿಂ ಹೆಸರಲ್ಲಿ. ಅವರು 1947–48ರ ಅವಧಿಯಲ್ಲಿ 709ರನ್ ಗಳಿಸಿದ್ದರು.
ಸದ್ಯ ಮುಂಬೈ ಮೊದಲ ಇನಿಂಗ್ಸ್ನಲ್ಲಿ 262 ರನ್ ಗಳಿಸಿ ಆಲೌಟ್ ಆಗಿದೆ. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿರುವ ಸೌರಾಷ್ಟ್ರ ಊಟದ ವಿರಾಮಕ್ಕೂ ಮುನ್ನ 28ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 77ರನ್ ಗಳಿಸಿದೆ.
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಔಟಾಗುವ ಮುನ್ನ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ಗಳು
ಆಟಗಾರ | ದೇಶ | ರನ್ | ಅವಧಿ |
ಕೆ.ಸಿ.ಇಬ್ರಾಹಿಂ | ಭಾರತ | 709 | 1947/48 |
ಗ್ರೇಮ್ ಹಿಕ್ | ಇಂಗ್ಲೆಂಡ್ | 645 | 1990 |
ವಿಜಯ್ ಮರ್ಚಂಟ್ | ಭಾರತ | 634 | 1947/42 |
ಪ್ಯಾಟ್ಸಿ ಹೆಂಡ್ರೆನ್ | ಇಂಗ್ಲೆಂಡ್ | 630 | 1929/30 |
ಎಸ್. ಬದ್ರಿನಾಥ್ | ಭಾರತ | 625 | 1907/08 |
ಪಿ. ಧರ್ಮಾನಿ | ಭಾರತ | 608 | 1999/00 |
ಸರ್ಫರಾಜ್ ಖಾನ್ | ಭಾರತ | 605 | 2019/20 |
ಎವರ್ಟನ್ ವೀಕ್ಸ್ | ವೆಸ್ಟ್ ಇಂಡೀಸ್ | 575 | 1950 |
ಫ್ರೆಡ್ಡಿ ಜೇಕ್ಮನ್ | ಇಂಗ್ಲೆಂಡ್ | 558 | 1951 |
ಬಾಬ್ ಸಿಂಪ್ಸನ್ | ಆಸ್ಟ್ರೇಲಿಯಾ | 545 | 1959/60 |
ವಿವಿಎಸ್ ಲಕ್ಷ್ಮಣ್ | ಭಾರತ | 538 | 1997/98 |
ವಿವಿಎಸ್ ಲಕ್ಷ್ಮಣ್ | ಭಾರತ | 530 | 1999/00 |
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.