ADVERTISEMENT

ಅಮೆರಿಕದ ಕ್ರಿಕೆಟ್‌ ಲೀಗ್‌ನಲ್ಲಿ ಕೆಕೆಆರ್ ಹೂಡಿಕೆ

ಪಿಟಿಐ
Published 1 ಡಿಸೆಂಬರ್ 2020, 14:59 IST
Last Updated 1 ಡಿಸೆಂಬರ್ 2020, 14:59 IST
ಶಾರೂಕ್ ಖಾನ್
ಶಾರೂಕ್ ಖಾನ್   

ಕೋಲ್ಕತ್ತ: ಬಾಲಿವುಡ್ ತಾರೆ ಶಾರೂಕ್ ಖಾನ್ ಸಹಮಾಲೀಕತ್ವದ ಕೋಲ್ಕತ್ತ ನೈಟ್ ರೈಡರ್ಸ್‌ ಸಮೂಹವು ಅಮೆರಿಕದಲ್ಲಿ ನಡೆಯಲಿರುವ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಹಣ ಹೂಡಿಕೆಮಾಡಲಿದೆ.

ಅಮೆರಿಕನ್ ಕ್ರಿಕೆಟ್ ಎಂಟರ್‌ಪ್ರೈಜಸ್ (ಎಸಿಇ) ಜೊತೆಗೂ ಕೆಕೆಆರ್ ಕೈಜೋಡಿಸಲಿದೆ. ಆ ಮೂಲಕ ಅಮೆರಿಕದಲ್ಲಿ ಕ್ರಿಕೆಟ್‌ ಕ್ರೀಡೆಯ ಬೆಳವಣಿಗೆಗೆ ಕಾರ್ಯನಿರ್ವಹಿಸಲಿದೆ ಎಂದು ಮೂಲಗಳುಮಂಗಳವಾರ ತಿಳಿಸಿವೆ

’ಅಮೆರಿಕದಲ್ಲಿ ಟಿ20 ಕ್ರಿಕೆಟ್‌ಗೆ ಉತ್ತಮ ಸ್ಪಂದನೆ ದೊರೆಯುವ ನಿರೀಕ್ಷೆಯಿದೆ. ಈ ಮಾದರಿಗೆ ಅಲ್ಲಿ ಒಳ್ಳೆಯ ಮಾರುಕಟ್ಟೆ ಇದೆ. ಮೇಜರ್ ಲೀಗ್ ಕ್ರಿಕೆಟ್‌ ಮೂಲಕ ಬೆಳೆಯಲು ಉತ್ತಮ ಅವಕಾಶವಿದೆ‘ ಎಂದು ಶಾರೂಕ್ ಖಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.