ಶಾಹೀನ್ ಶಾ ಅಫ್ರಿದಿ
ದುಬೈ: ಭಾರತದ ವಿರುದ್ಧ ಪಾಕಿಸ್ತಾನ ನಿರಂತರವಾಗಿ ಪ್ರಾಬಲ್ಯ ಸಾಧಿಸುತ್ತಿದೆ. ಹಾಗಿರುವಾಗ ಪಾಕ್ ತಂಡವನ್ನು ಇನ್ನುಮುಂದೆ ಪೈಪೋಟಿ ನೀಡುವ ತಂಡ ಎಂದು ಪರಿಗಣಿಸಬಾರದು ಎಂಬ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರ ಅಭಿಪ್ರಾಯಕ್ಕೆ ಪಾಕ್ ವೇಗಿ ಶಾಹೀನ್ ಶಾ ಅಫ್ರಿದಿ ತಿರುಗೇಟು ನೀಡಿದ್ದಾರೆ. ಮಾತ್ರವಲ್ಲ, ತಮ್ಮ ತಂಡದ ಗಮನ ಏಷ್ಯಾಕಪ್ ಗೆಲ್ಲುವತ್ತ ಇದೆ ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅದು ಅವರ ಅಭಿಪ್ರಾಯ, ಅವರು ಹೇಳಲಿ. ಮುಂದಿನ ಪಂದ್ಯದಲ್ಲಿ ನಾವು ಮತ್ತೆ ಎದುರಾದಾಗ ಏನಾಗುತ್ತದೆ ಎಂದು ಕಾದು ನೋಡುತ್ತೇವೆ. ನಾವು ಏಷ್ಯಾ ಕಪ್ ಗೆಲ್ಲಲು ಇಲ್ಲಿದ್ದೇವೆ. ಅದಕ್ಕಾಗಿ ನಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತೇವೆ" ಎಂದು ಅಫ್ರಿದಿ ಹೇಳಿದರು.
ಭಾರತ-ಪಾಕಿಸ್ತಾನ ನಡುವಿನ ಈ ಹಿಂದಿನ 15 ಟಿ–20 ಅಂತರರಾಷ್ಟ್ರೀಯ ಮುಖಾಮುಖಿಗಳಲ್ಲಿ ಭಾರತ 12 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಪಾಕಿಸ್ತಾನ ಕೇವಲ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಹಿನ್ನೆಲೆಯಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಪಾಕಿಸ್ತಾನ ನಮಗೆ ಸರಿಸಾಟಿಯೇ ಇಲ್ಲ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.