ADVERTISEMENT

ಅಪಾಯಕಾರಿ ಪಿಚ್: ಮೆಲ್ಬೋರ್ನ್ ಅಂಗಳದಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಅಪ್ಪಳಿಸಿದ ಚೆಂಡು

ದಿನದಾಟ ಮೊಟಕು

ಏಜೆನ್ಸೀಸ್
Published 7 ಡಿಸೆಂಬರ್ 2019, 10:58 IST
Last Updated 7 ಡಿಸೆಂಬರ್ 2019, 10:58 IST
ಮೆಲ್ಬೋರ್ನ್‌ ಪಿಚ್‌ (2018ರ ಚಿತ್ರ)
ಮೆಲ್ಬೋರ್ನ್‌ ಪಿಚ್‌ (2018ರ ಚಿತ್ರ)   

ಮೆಲ್ಬೋರ್ನ್‌: ವೆಸ್ಟ್ರನ್‌ ಆಸ್ಟ್ರೇಲಿಯಾ ಹಾಗೂ ವಿಕ್ಟೋರಿಯಾ ತಂಡಗಳ ನಡುವೆ ಮೆಲ್ಬೋರ್ನ್‌ಕ್ರಿಡಾಂಗಣದಲ್ಲಿ ಆರಂಭವಾಗಿದ್ದಶೆಫೀಲ್ಡ್‌ ಶೀಲ್ಡ್‌ಟೆಸ್ಟ್‌ ಟೂರ್ನಿಯ ಪಂದ್ಯದ ವೇಳೆಪಿಚ್‌ ಅಪಾಯಕಾರಿಯಾಗಿ ವರ್ತಿಸುತ್ತಿದ್ದ ಕಾರಣ ದಿನದಾಟವನ್ನುಅರ್ಧಕ್ಕೆ ನಿಲ್ಲಿಸಲಾಯಿತು.

ಶನಿವಾರ ಆರಂಭವಾದ ಪಂದ್ಯದಲ್ಲಿ ಟಾಸ್‌ ಗೆದ್ದ ವಿಕ್ಟೋರಿಯಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಬ್ಯಾಟಿಂಗ್ ಆರಂಭಿಸಿದ್ದ ವೆಸ್ಟ್ರನ್‌ ಆಸ್ಟ್ರೇಲಿಯಾ ತಂಡ 39.4 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿದ್ದ ವೇಳೆ ಆಟ ಮೊಟಕು ಗೊಳಿಸಲಾಯಿತು.

ಬೌಲಿಂಗ್ ವೇಳೆ ಚೆಂಡು ಅನಿರಿಕ್ಷಿತ ಪುಟಿತ ಕಾಣುತ್ತಿದ್ದುದರಿಂದ ಬ್ಯಾಟ್ಸ್‌ಮನ್‌ಗಳು ಸಾಕಷ್ಟು ಹೊಡೆತ ತಿಂದಿದ್ದರು. ಹೀಗಾಗಿ ಅಪಾಯದ ಮುನ್ಸೂಚನೆ ಅರಿತು ವೆಸ್ಟ್ರನ್‌ ತಂಡದ ನಾಯಕ ಶಾನ್‌ ಮಾರ್ಶ್‌ ಹಾಗೂ ವಿಕ್ಟೋರಿಯಾ ನಾಯಕ ಪೀಟರ್ ಹ್ಯಾಂಡ್ಸ್‌ಕಂಬ್‌ ಅಂಪೈರ್ ಜೊತೆ ಮಾತುಕತೆ ನಡೆಸಿ ಆಟ ನಿಲ್ಲಿಸುವ ನಿರ್ಧಾರಕ್ಕೆ ಬಂದರು.

ADVERTISEMENT

‘ಮೆಲ್ಬೋರ್ನ್‌ ಕ್ರಿಕೆಟ್ ಅಂಗಳದಲ್ಲಿ ನಡೆಯುತ್ತಿದ್ದ ಶೆಫೀಲ್ಡ್‌ ಶೀಲ್ಡ್‌ ಪಂದ್ಯವನ್ನು ಅನಿರ್ಧಿಷ್ಟಾವಧಿಗೆ ನಿಲ್ಲಿಸಲಾಗಿದೆ’ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ಪ್ರಕಟಣೆ ಹೊರಡಿಸಿದೆ. ಆ ಸಂಬಂಧ ಟ್ವಿಟರ್‌ನಲ್ಲಿಯೂಮಾಹಿತಿನೀಡಿದೆ.

ಇಲ್ಲಿ ಇತ್ತೀಚೆಗೆ ನಡೆದ ಹಲವು ಪಂದ್ಯಗಳ ಸಂದರ್ಭದಲ್ಲಿಯೂ ಪಿಚ್‌ ಬಗ್ಗೆ ಟೀಕೆಗಳು ಕೇಳಿಬಂದಿದ್ದವು.2017ರ ಆ್ಯಷಸ್‌ ಸರಣಿಯ ಬಾಂಕ್ಸಿಂಗ್‌ ಡೇ ಟೆಸ್ಟ್‌ ವೇಳೆಯೂ ಪಿಚ್‌ ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು. ಆಗ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ‍ಕ್ರೀಡಾಂಗಣಕ್ಕೆ ಪಿಚ್‌ ಗುಣಮಟ್ಟ‘ಕಳಕೆ’ಯಾಗಿದೆ ಎಂದು ಉಚ್ಛರಿಸಿತ್ತು.

ಇದೇ ತಿಂಗಳು 12ರಿಂದ ನ್ಯೂಜಿಲೆಂಡ್‌ ಹಾಗೂ ಆಸ್ಟ್ರೇಲಿಯಾತಂಡಗಳ ನಡುವಣ ಮೂರು ಪಂದ್ಯಗಳ ಟೆಸ್ಟ್‌ ಸರಣಿ ಆರಂಭವಾಗಲಿದೆ. ಡಿಸೆಂಬರ್‌ 26ರಿಂದ 30ರವರೆಗೆ ಇಲ್ಲಿ ಸರಣಿಯ ಎರಡನೇ ಟೆಸ್ಟ್‌ ನಡೆಸಲು ನಿರ್ಧರಿಸಲಾಗಿದೆ. ಆದರೆ ಪಿಚ್‌ ಬಗ್ಗೆ ಅಸಮಾಧಾನ ಕೇಳಿ ಬಂದಿರುವುದರಿಂದ ಪಂದ್ಯ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.