ಸ್ಟೀವ್ ಸ್ಮಿತ್
ಎಕ್ಸ್ ಚಿತ್ರ: @ICC
ಗಾಲೆ (ಶ್ರೀಲಂಕಾ): ಮೊದಲ ಎಸೆತದಲ್ಲೇ ಒಂದು ರನ್ ಹೊಡೆದು ಟೆಸ್ಟ್‌ನಲ್ಲಿ 10 ಸಾವಿರ ರನ್‌ಗಳ ಮೈಲಿಗಲ್ಲು ದಾಟಿದ ಸ್ಟೀವ್ ಸ್ಮಿತ್ ನಂತರ ಶತಕವನ್ನೂ (ಔಟಾಗದೇ 104) ಪೋಣಿಸಿದರು. ಶ್ರೀಲಂಕಾ ವಿರುದ್ಧ ಬುಧವಾರ ಆರಂಭವಾದ ಮೊದಲ ಟೆಸ್ಟ್‌ನಲ್ಲಿ ಆರಂಭ ಆಟಗಾರ ಉಸ್ಮಾನ್ ಖ್ವಾಜಾ (ಔಟಾಗದೇ 147) ಕೂಡ ಶತಕ ಬಾರಿಸಿದರು.
ದಿನದಾಟ ಮುಗಿದಾಗ ಆಸ್ಟ್ರೇಲಿಯಾ 81.1 ಓವರುಗಳಲ್ಲಿ 2 ವಿಕೆಟ್‌ಗೆ 330 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿದೆ. 8.5 ಓವರುಗಳ ಆಟ ಬಾಕಿಯಿರುವಾಗ ಮಳೆಯಿಂದಾಗಿ ಆಟ ಬೇಗ ಸ್ಥಗಿತಗೊಂಡಿತು. ಎರಡು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಪ್ರವಾಸಿ ತಂಡಕ್ಕೆ ಸ್ಮಿತ್ ಮತ್ತು ಟ್ರಾವಿಸ್ ಹೆಡ್ 92 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದ್ದರು. ಹೆಡ್, ಸ್ಯಾಮ್ ಕೊನ್ಸ್‌ಟಾಸ್ ಬದಲು ಅವಕಾಶ ಪಡೆದಿದ್ದರು.
ಎಡಗೈ ಆಟಗಾರ ಖ್ವಾಜಾ ಮತ್ತು ಸ್ಮಿತ್ ನಂತರ ಮುರಿಯದ ಮೂರನೇ ವಿಕೆಟ್‌ಗೆ 195 ರನ್ ಸೇರಿಸಿದ್ದಾರೆ. 38 ವರ್ಷ ವಯಸ್ಸಿನ ಖ್ವಾಜಾ (210 ಎಸೆತ) ಮತ್ತು ಸ್ಮಿತ್ (188 ಎಸೆತ) ತಲಾ 10 ಬೌಂಡರಿ, 1 ಸಿಕ್ಸರ್ ಬಾರಿಸಿದ್ದಾರೆ. ಖ್ವಾಜಾಗೆ ಇದು 16ನೇ ಶತಕ.
ಇದು ಸ್ಮಿತ್‌ಗೆ ನಾಲ್ಕು ಪಂದ್ಯಗಳಲ್ಲಿ ಇದು ಮೂರನೇ ಶತಕ. ಸ್ಮಿತ್ ಈ ಪಂದ್ಯಕ್ಕೆ ಮೊದಲು 9999 ರನ್ ಗಳಿಸಿದ್ದರು. ಇನಿಂಗ್ಸ್‌ನ ಆರಂಭದಲ್ಲಿ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ತಮ್ಮದೇ ಬೌಲಿಂಗ್‌ನಲ್ಲಿ ಸ್ಮಿತ್ ಅವರಿಂದ ಬಂದ ಸ್ವಲ್ಪ ಕಷ್ಟದ ಕ್ಯಾಚನ್ನು ಬಿಟ್ಟಿದ್ದರು.
ಸ್ಕೋರುಗಳು:
ಆಸ್ಟ್ರೇಲಿಯಾ: 81.1 ಓವರುಗಳಲ್ಲಿ 2 ವಿಕೆಟ್‌ಗೆ 330 (ಉಸ್ಮಾನ್ ಖ್ವಾಜಾ ಔಟಾಗದೇ 147, ಟ್ರಾವಿಸ್ ಹೆಡ್ 57, ಸ್ಟೀವ್ ಸ್ಮಿತ್ ಔಟಾಗದೇ 104)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.