ADVERTISEMENT

ಸ್ಮೃತಿ ಮಂದಾನ– ಪಾಲಾಶ್‌ ಮುಚ್ಛಲ್‌ ನಿಶ್ಚಿತಾರ್ಥ

ಪಿಟಿಐ
Published 21 ನವೆಂಬರ್ 2025, 17:06 IST
Last Updated 21 ನವೆಂಬರ್ 2025, 17:06 IST
<div class="paragraphs"><p>ಸ್ಮೃತಿ ಮಂದಾನ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದ ತುಣುಕು</p></div>

ಸ್ಮೃತಿ ಮಂದಾನ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದ ತುಣುಕು

   

ನವದೆಹಲಿ: ವಿಶ್ವಕಪ್‌ ವಿಜೇತ ಭಾರತ ಮಹಿಳಾ ಕ್ರಿಕೆಟ್‌ ತಂಡದ ಉಪನಾಯಕಿ ಸ್ಮೃತಿ ಮಂದಾನ ಅವರು ಸಂಗೀತಗಾರ ಪಾಲಾಶ್‌ ಮುಚ್ಛಲ್‌ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಬಗ್ಗೆ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಶುಕ್ರವಾರ ವಿಡಿಯೊ ಹಂಚಿಕೊಳ್ಳುವ ಮೂಲಕ ಅಧಿಕೃತವಾಗಿ ಪ್ರಕಟಿಸಿದ್ದಾರೆ.

ವಿವಾಹಪೂರ್ವ ಕಾರ್ಯಕ್ರಮಗಳು ಈಗಾಗಲೇ ಆರಂಭವಾಗಿವೆ. ಭಾರತ ತಂಡದ ಆಟಗಾರ್ತಿಯರಾದ ರಾಧಾ ಯಾದವ್‌, ಜೆಮಿಮಾ ರಾಡ್ರಿಗಸ್‌, ಶ್ರೇಯಾಂಕಾ ಪಾಟೀಲ್‌ ಹಾಗೂ ಅರುಂಧತಿ ರೆಡ್ಡಿ ಅವರು  ಸ್ಮೃತಿ ಅವರೊಂದಿಗೆ ನೃತ್ಯ ಮಾಡಿರುವ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ನಿಶ್ಚಿತಾರ್ಥದ ವೇಳೆ ತೊಡಿಸಿರುವ ಉಂಗುರವನ್ನು ಸ್ಮೃತಿ ಅವರು ತೋರಿಸಿದ್ದು, ವಿಡಿಯೊ ತುಣುಕು ವ್ಯಾಪಕವಾಗಿ ಹರಿದಾಡಿದೆ.

ADVERTISEMENT

ಸ್ಮೃತಿ ಅವರನ್ನು ಡಿ.ವೈ.ಪಾಟೀಲ ಕ್ರೀಡಾಂಗಣಕ್ಕೆ ಕರೆದೊಯ್ದು, ಉಂಗುರ ತೊಡಿಸುವ ವಿಡಿಯೊವನ್ನು ಪಾಲಾಶ್‌ ಹಂಚಿಕೊಂಡಿದ್ದಾರೆ.

‘ಸ್ಮೃತಿ ಮತ್ತು ಪಾಲಾಶ್‌ ಅವರು ನವಜೀವನ ಆರಂಭಿಸುತ್ತಿದ್ದಾರೆ. ಸ್ಮೃತಿ ಅವರ ಕವರ್‌ ಡ್ರೈವ್‌ ಹೊಡೆತ ಹಾಗೂ ಪಾಲಾಶ್‌ ಅವರ ಮಧುರ ಸಂಗೀತ ಇಬ್ಬರ ದಾಂಪತ್ಯವನ್ನು ಒಟ್ಟಿಗೆ ಬೆಸೆಯಲಿವೆ. ಇಬ್ಬರಿಗೂ ಶುಭವಾಗಲಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹಾರೈಸಿದ್ದಾರೆ.

ಮಂದಾನ– ಮುಚ್ಛಲ್‌ ಜೋಡಿಯು ಭಾನುವಾರ (ನವೆಂಬರ್‌ 23) ದಾಂಪತ್ಯ ಜೀವನಕ್ಕೆ ಕಾಲಿಡಲಿದೆ.

ಆರ್‌ಸಿಬಿ ಮಹಿಳಾ ತಂಡದ ನಾಯಕಿಯೂ ಆಗಿರುವ ತಾರಾ ಬ್ಯಾಟರ್‌ ಸ್ಮೃತಿ ಹಾಗೂ ಪಾಲಾಶ್‌ ನಡುವೆ 2019ರಲ್ಲಿ ಸ್ನೇಹ ಚಿಗುರಿತ್ತು ಎನ್ನಲಾಗಿದೆ. ಪಾಲಾಶ್‌ ಅವರು ಬಾಲಿವುಡ್‌ನಲ್ಲಿ ನಿರ್ದೇಶಕ, ನಿರ್ಮಾಪಕರಾಗಿಯೂ ಹೆಸರು ಮಾಡಿದ್ದಾರೆ.

ಸ್ಮೃತಿ ಮಂದಾನ ಪಾಲಾಶ್‌ ಮುಚ್ಛಲ್‌
ಸ್ಮೃತಿ ಮಂದಾನ ಪಾಲಾಶ್‌ ಮುಚ್ಛಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.